ಔರಾದ: ಕಮಲನಗರ ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಕಡಲೆ ಖರೀದಿ ಕೇಂದ್ರವನ್ನು ಪ್ರಾರಂಭಿಸಿದ್ದು ರೈತರು ತಾಳ್ಮೆಯಿಂದ ತಮ್ಮ ಕಾಳನ್ನು ಮಾರಾಟ ಮಾಡಿ ಬೆಂಬಲ ಬೆಲೆಯ ಲಾಭ ಪಡೆದುಕೊಳ್ಳಿ ಎಂದು ರ೦ಗರಾವ ಜಾಧವ ಹೇಳಿದರು.
ಅವರು ಪಟ್ಟಣದ ಎಪಿಎಂಸಿ ಆವರಣದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ ಕಡಲೆ ಮಾರಾಟ ಕೇಂದ್ರ ಉದ್ಘಾಟಿಸಿ ಮಾತನಾಡಿದರು. ಈಗ ರಾಜ್ಯದಲ್ಲಿ ಕಡಲೆ ಬೆಳೆದ ರೈತರು ಕಟಾವು ಮಾಡಿ, ರಾಶಿ ಮಾಡಿ ಮಾರಾಟ ಮಾಡುವ ಹಂತದಲ್ಲಿದ್ದಾರೆ ಹಾಗೂ ಈಗಾಗಲೇ ರಾಶಿ ಮಾಡಿ ಬಹಳ ದಿನವಾಗಿದ್ದು ಖರೀದಿ ಕೇಂದ್ರ ಬೇಗ ಆರಂಭಿಸುವಂತೆ ಆಗ್ರಹ ವ್ಯಕ್ತವಾಗಿತ್ತು ಮಾರುಕಟ್ಟೆ ಯಲ್ಲಿ ಕಡಲೆ ದರ ಅತ್ಯಂತ ಇಳಿಕೆ ಯಾಗಿದೆ ಈಗಿನ ಮಾರುಕಟ್ಟೆ ದರಕ್ಕೆ ಮಾರಾಟ ಮಾಡಿದರೆ ರೈತರಿಗೆ ಹಾನಿಯಾಗುವ ಲಕ್ಷಣವಿದೆ.
ಆದ್ದರಿಂದ ರೈತರ ಆಗ್ರಹಕ್ಕೆ ಮಣಿದು ಕೊನೆಗೂ ಬೆಂಬಲ ಬೆಲೆಯಲ್ಲಿ ಕಡಲೆ ಕಾಳು ಖರೀದಿ ಸಲು ರಾಜ್ಯ ಸರ್ಕಾರದ ಸಹಕಾರ ಇಲಾಖೆ ಆದೇಶ ಹೊರಡಿಸಿದೆ. ಬೆ೦ಬಲ ಬೆಲೆಯು ಪ್ರತಿ ಕ್ವಿಂಟಲಗೆ 5335 ರೂ. ಇರಲಿದೆ ಎಂದರು.
ಈ ಸ೦ದರ್ಭದಲ್ಲಿ ಪಿ.ಕೆ.ಪಿ. ಎಸ್ ಅಧ್ಯಕ್ಷ ಗಂಗಪ್ಪಾ ಸೋಲಾಪುರೆ, ಶಿವಾನಂದ ವಡ್ಡೆ, ಮನೋಹರ ಜಾಧವ, ಅಂಕುಶ ವಾಡೇಕರ, ಪ್ರದೀಪ ಬಿರಾದಾರ, ನಾಗೇಶ ಚಾಂಡೇಶ್ವರೆ, ವಿಠಲ್ ಪಾಟೀಲ ಬಾಲುರು, ಚಾಂಗೂಣೆ ಮುಂತಾದ ರೈತರು ಹಾಜರಿದ್ದರು.