ಔರಾದ: ವಿದ್ಯಾರ್ಥಿಗಳು ಸ್ಪಷ್ಟವಾಗಿ ಗುರಿ ಮತ್ತು ಉದ್ದೇಶಗಳನ್ನು ಇಟ್ಟುಕೊಂಡು ಓದಿದರೆ ಖಂಡಿತ ಯಶಸ್ವಿಯನ್ನು ಕಾಣುತ್ತಾರೆ ಎಂದು ಕೌಶಲ್ಯ ಮತ್ತು ಇಚ್ಛೆ ಅಭಿವೃದ್ದಿ ಸಂಸ್ಥೆ ಬೆಂಗಳೂರು ಸಂಸ್ಥಾಪಕ ಡಾ. ಜಗನ್ನಾಥ ರಾವ್ ಹೇಳಿದರು.
ಸಂತಪುರ ಸಿದ್ದರಾಮೇಶ್ವರ ಪದವಿಪೂರ್ವ ಕಾಲೇಜು ಹಾಗೂ ಡಾ. ಕಲ್ಲಪ್ಪ ಉಪ್ಪೆ ಅಭಿಮಾನಿ ಬಳಗ ವತಿಯಿಂದ ಸ್ವಾಮಿ ವಿವೇಕಾನಂದ ಜಯಂತಿ ಪ್ರಯುಕ್ತ ಎರಡು ದಿನ ವ್ಯಕ್ತಿತ್ವ ವಿಕಸನ ತರಬೇತಿ ಕಾರ್ಯಗಾರದಲ್ಲಿ ಅವರು ಮಾತನಾಡಿದರು.
ಇಂದಿನ ಯುವ ವಿದ್ಯಾರ್ಥಿಗಳು ಒಳ್ಳೆಯ ಸಂಸ್ಕೃತರಾಗಿರುವುದೇ ತಂದೆ ತಾಯಿಗಳಿಗೆ ನೀಡುವ ಗೌರವ. ಅಹಂಕಾರ ಹಾಗೂ ಲಾಭ ಮನೋಭಾವನೆಗಳು ಹಿಂದಿನ ವಿದ್ಯಾರ್ಥಿಗಳು ಹೊಂದಿದ್ದಾರೆ. ಅಹಂಕಾರದಿಂದ ಹೊರಬರಬೇಕಾದರೆ ಬುದ್ಧಿವಂತ ಹಾಗೂ ಜ್ಞಾನಿಗಳಾಗಿರಬೇಕು. ಧನಾತ್ಮಕ ವಿಚಾರ ಹಾಗೂ ಸ್ವಲಂಬನೆ ಜೀವನ ಯಶಸ್ವಿ ಆಗಬೇಕು ಎಂದು ಕಿವಿ ಮಾತು ಹೇಳಿದರು.
ಪ್ರಾಂಶುಪಾಲ್ ನವೀಲಕುಮಾರ್ ಉತ್ಕಾರ್ ಮಾತನಾಡಿ, ಸ್ವಾಮಿ ವಿವೇಕಾನಂದ್ ಜಯಂತಿ ಪ್ರಯುಕ್ತವಾಗಿ ಎರಡು ದಿನದ ತರಬೇತಿ ಕಾರ್ಯಗಾರದಲ್ಲಿ ವಿದ್ಯಾರ್ಥಿಗಳು ಸಂಪೂರ್ಣವಾಗಿ ಜ್ಞಾನ ಪಡೆದು ಇದರ ಸದುಪಯೋಗಪಡಿಸಿಕೊಳ್ಳಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಮುಖ್ಯ ಗುರುಗಳಾದ ಮನೋಹರ್ ಬಿರಾದರ, ಉಪನ್ಯಾಸಕರಾದ ಕಲ್ಲಪ್ಪ ಬುಟ್ಟೆ, ಶಿವಪುತ್ರ ಧರಣಿ, ಸುಧಾ ಕೌಟಗೆ, ವನದೇವಿ ಎಕ್ಕಳೆ, ಮೀರಾತಾಯಿ ಕಾಂಬಳೆ, ಅಂಬಿಕಾ ವಿಶ್ವಕರ್ಮ ಸೇರಿದಂತೆ ಇತರರು ಉಪಸ್ಥಿತರಿದ್ದರು.