News Karnataka
ಕ್ಯಾಂಪಸ್

ಗುರಿಯಿಲ್ಲದ ಜೀವನ, ಗರಿ ಇಲ್ಲದ ಹಕ್ಕಿಯಂತೆ

Life without aim, like a bird without a feather: Geeta
Photo Credit : Ravi Mathapati

ಔರಾದ: ವಿದ್ಯಾರ್ಥಿಗಳು ಜೀವನದಲ್ಲಿ ಗುರಿ ಇಟ್ಟುಕೊಂಡು ಅಧ್ಯಯನ ಮಾಡಿದಾಗ ಯಶಸ್ವಿಯಾಗಬಹುದು, ಇಲ್ಲದಿದ್ದಲ್ಲಿ ಜೀವನ ಅಸ್ತವ್ಯಸ್ತವಾಗುವುದು ನಿಶ್ಚಿತ ಎಂದು ಜೋಜನಾಳ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಂಪನ್ಮೂಲ ಶಿಕ್ಷಕಿ ಗೀತಾ ಜೋಜನೆ ಹೇಳಿದರು. ತಾಲೂಕಿನ ಸಂತಪೂರ ಸಿದ್ದರಾಮೇಶ್ವರ ಪದವಿಪೂರ್ವ ಕಾಲೇಜಿನಲ್ಲಿ ಇಂದು ನಡೆದ 65ನೇ ಪುನಶ್ಚೇತನ ಕಾರ್ಯಾಗಾರದಲ್ಲಿ ಮಾತನಾಡಿದರು.

ವಚನ ಸಾಹಿತ್ಯ ಅಧ್ಯಯನ ಮಾಡಿದರೆ ಮಾನವನು ತನ್ನ ಜೀವನದಲ್ಲಿ ಅಹಂಕಾರ ಪಡದೆ ವಿನಯತೆ ಕಲಿತುಕೊಳ್ಳುತ್ತಾನೆ. ಕಠಿಣ ವಿಷಯಗಳನ್ನು ಸರಳ ಸೂತ್ರೀಕರಣ ಮೂಲಕ ಅಭ್ಯಾಸ ಮಾಡಿದರೆ ಬಹಳ ಸರಳವಾಗಿ ಅರ್ಥವಾಗುತ್ತದೆ ಎಂದರು. ಅನುಭವ ಮಂಟಪ ಗುರುಕುಲ ಶಾಲೆಯ ಸಂಪನ್ಮೂಲ ಶಿಕ್ಷಕರಾದ ಸಂಗಮೇಶ ಬ್ಯಾಳೆ ಮಾತನಾಡಿ, ಜೀವನದಲ್ಲಿ ಅಭ್ಯಾಸ, ಅಂಕಗಳ ಜೊತೆಗೂ ಸಂಸ್ಕಾರ ಕಲಿಯುವುದು ಬಹಳ ಮುಖ್ಯವಾಗಿದೆ. ವಿದ್ಯಾರ್ಥಿಗಳು ನಂಬಿಕೆ ಮತ್ತು ಏಕಾಗ್ರತೆಯಿಂದ ಅಭ್ಯಾಸ ಮಾಡುವ ಮೂಲಕ ಪ್ರತಿಭಾವಂತ ವಿದ್ಯಾರ್ಥಿಯಾಗಿ ಹೊರ ಹೊಮ್ಮುತ್ತಾರೆ ಎಂದರು.

ಪ್ರಾಂಶುಪಾಲ ನವೀಲಕುಮಾರ ಉತ್ಕಾರ್ ಮಾತನಾಡಿದರು. ಈ ಸಂದರ್ಭದಲ್ಲಿ ಉಪನ್ಯಾಸಕರಾದ ಕಲ್ಲಪ್ಪ ಬುಟ್ಟೆ, ಶಿವಪುತ್ರ ಧರಣಿ, ಸುಧಾ ಕೌಟಿಗೆ, ವನದೇವಿ ಎಕ್ಕಳೆ, ಅಂಬಿಕಾ ವಿಶ್ವಕರ್ಮ, ಮೀರಾತಾಯಿ ಕಾಂಬಳೆ ಮತ್ತು ಇತರರು ಉಪಸ್ಥಿತರಿದ್ದರು.

Ravi Mathapati

Read More Articles
MANY DROPS MAKE AN OCEAN
Support NewsKarnataka's quality independent journalism with a small contribution.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *