ಔರಾದ: ಪರೀಕ್ಷಾ ಫಲಿತಾಂಶ ಸುಧಾರಣೆಗಾಗಿ ಹಲವಾರು ಕ್ರಮಗಳನ್ನು ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಪೋಷಕರು ಸೇರಿ ವಿವಿಧ ಮತ್ತು ವಿನೂತನ ಕ್ರಿಯಾ ಯೋಜನೆ ತಯಾರಿಸಬೇಕು ಎಂದು ಸುಭಾಷ್ ಚಂದ್ರಬೋಸ್ ಪ್ರೌಢಶಾಲೆ ಮುಖ್ಯ ಗುರುಗಳಾದ ಮನೋಹರ ಬಿರಾದರ ಹೇಳಿದರು.
ತಾಲೂಕಿನ ಸಂತಪುರ ಸಿದ್ದರಾಮೇಶ್ವರ ಪದವಿಪೂರ್ವ ಕಾಲೇಜಿನಲ್ಲಿ ನಡೆದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳ ಶೈಕ್ಷಣಿಕ ಕಾರ್ಯಗಾರ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿ, ಬರವಣಿಗೆ ಕೌಶಲ್ಯ, ಗುಂಪು ಚರ್ಚೆ, ವಿಶೇಷ ಉಪನ್ಯಾಸ ಹಾಗೂ ಮಾರ್ಗದರ್ಶನದಿಂದ ಹತ್ತನೇ ತರಗತಿ ಮಕ್ಕಳಿಗೆ ಅಭ್ಯಾಸ ಮಾಡಿಸಿದರೆ ಪರೀಕ್ಷೆ ಆತ್ಮವಿಶ್ವಾಸದಿಂದ ಎದುರಿಸುತ್ತಾರೆ ಎಂದು ಹೇಳಿ ಗಣಿತ ವಿಷಯದ ಸರಳ ಗಳಿಕೆಯ ಮಾರ್ಗವನ್ನು ತಿಳಿಸಿಕೊಟ್ಟರು.
ಎಕಲಾರ ಸರ್ಕಾರಿ ಪ್ರೌಢಶಾಲೆಯ ಮುಖ್ಯ ಗುರುಗಳಾದ ಜ್ಞಾನೇಶ್ವರ ಪಾಂಚಾಳ ಮಾತನಾಡಿ, ವಿಜ್ಞಾನ ವಿಷಯದ ಪರೀಕ್ಷಾ ದೃಷ್ಟಿಯಿಂದ ಸರಳವಾಗಿ ಚಿತ್ರ ಬಿಡಿಸುವ ಮಾರ್ಗವನ್ನು ತಿಳಿಸಿದರು. ಜೀವಶಾಸ್ತ್ರ ಓದಿದರೆ ಪಾಸ್ ಆಗುವ ಸಾಧ್ಯತೆಗಳು ಹೆಚ್ಚು ಎಂದರು.
ಪ್ರಾಂಶುಪಾಲ ನವೀಲಕುಮಾರ್ ಉತ್ಕಾರ್ ಮಾತನಾಡಿ, ಕಠಿಣ ವಿಷಯಗಳನ್ನು ಹೆಚ್ಚು ಅಭ್ಯಾಸ ಮಾಡಿದರೆ ಹೆಚ್ಚು ಅಂಕ ಪಡೆಯಬಹುದು. ಎಸ್‌ಎಸ್‌ಎಲ್‌ಸಿ ಪರೀಕ್ಷೆ ವಿದ್ಯಾರ್ಥಿಗಳ ಜೀವನದ ಮೊದಲ ಘಟ್ಟ ಹಾಗಾಗಿ ಯಶಸ್ವಿಯಾಗಿ ಪರೀಕ್ಷೆ ಬರೆದು, ಜೀವನ ರೂಪಿಕೊಳ್ಳಬೇಕು ಎಂದರು.
ಈ ವೇಳೆ ವಡಗಾಂವ್ ಸರ್ಕಾರಿ ಕನ್ಯಾ ಪ್ರೌಢಶಾಲೆಯ ಶಿಕ್ಷಕರಾದ ಅನೀಲ್ ಬನಸೋಡೆ, ಕೌಡಗಾಂವ ಸರ್ಕಾರಿ ಪ್ರೌಢಶಾಲೆ ಶಿಕ್ಷಕರಾದ ವಿಜಯಕುಮಾರ ಜೋಜನೆ, ಮೊರಾರ್ಜಿ ವಸತಿ ಶಾಲೆಯ ಶಿಕ್ಷಕರಾದ ರಾಜಕುಮಾರ ಮತ್ತು ಸಂತಪುರ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿಗಳು. ಉಪನ್ಯಾಸಕರಾದ ಕಲ್ಲಪ್ಪ ಬುಟ್ಟೆ, ಶಿವಪುತ್ರ ಧರಣಿ ಸುಧಾ ಕೌಟಿಗೆ, ವನದೇವಿ ಎಕ್ಕಳೆ, ಅಂಬಿಕಾ ವಿಶ್ವಕರ್ಮ, ಮೀರಾತಾಯಿ ಕಾಂಬಳೆ, ಸಹ ಶಿಕ್ಷಕರಾದ ಸಿದ್ದಾರೆಡ್ಡಿ ಇತರರು ಉಪಸ್ಥಿತರಿದ್ದರು.