ಔರಾದ: ಸಂತಪುರ ಸಿದ್ದರಾಮೇಶ್ವರ ಕಾಲೇಜು ಸತತವಾಗಿ ಐದು ವರ್ಷ ನೂರು ಪ್ರತಿಶತ ಫಲಿತಾಂಶ, ಮೂರು ವರ್ಷ ಜಿಲ್ಲೆಗೆ ಟಾಪ್ ಆಗಿ ಹೊರಹೋಮಿದ್ದು, ಕಲ್ಯಾಣ ಕರ್ನಾಟಕದಲ್ಲಿಯೆ ಸಾಧನೆಯ ಕಾಲೇಜಾಗಿದ್ದು ನಮ್ಮೆಲ್ಲರಿಗೂ ಸಂತೋಷ ತಂದಿದೆ ಎಂದು ಕೆಎಎಸ್ ಅಧಿಕಾರಿ ಖಾಜಾ ಖಲೀಲುಲ್ಲಾ ಹೇಳಿದರು.
ಸಂತಪುರ್ ಸಿದ್ದರಾಮೇಶ್ವರ ಪದವಿ ಪೂರ್ವ ಕಾಲೇಜಿನಲ್ಲಿ ಕೆಎಎಸ್ ಅಧಿಕಾರಿ ಖಾಜಾ ಖಲೀಲುಲ್ಲಾ ಗೆಳೆಯರ ಬಳಗ ವತಿಯಿಂದ ನಡೆದ ಸಿದ್ದರಾಮೇಶ್ವರ ಕಾಲೇಜಿನ ಸಾಧನೆಯ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಕಾಲೇಜಿನ ಸಿಬ್ಬಂದಿಗಳು ಸಮಯವನ್ನು ಲೆಕ್ಕಿಸದೆ ಪ್ರಯತ್ನಿಸಿದಕ್ಕೆ ಇಂದು ಜಿಲ್ಲೆಯಲ್ಲೇ ಗುರುತಿಸಿಕೊಳ್ಳುವಂತಹ ಕಾಲೇಜಾಗಿದೆ ಎಂದರು. ವೈದ್ಯಾಧಿಕಾರಿ ಸಿದ್ದಾರೆಡ್ಡಿ ಬಿರಾದರ್ ಮಾತನಾಡಿ, ಕಾಲೇಜಿನಲ್ಲಿ ಮಕ್ಕಳಿಗೆ ಎಲ್ಲಾ ಪ್ರಕಾರದ ಪಠ್ಯ ಮತ್ತು ಪತ್ಯೇತರ ಚಟುವಟಿಕೆಯಿಂದ ಮಕ್ಕಳ ಸರ್ವಾಂಗೀಣ ವಿಕಾಸ ಈ ಕಾಲೇಜಿನವರು ಮಾಡುತ್ತಿದ್ದಾರೆ ಎಂದರು.
ಪ್ರಾಂಶುಪಾಲ ನವೀಲಕುಮಾರ ಉತ್ಕಾರ್ ಮಾತನಾಡಿ, ನಮ್ಮ ಕಾಲೇಜಿನ ಫಲಿತಾಂಶ ಮತ್ತು ಮಕ್ಕಳ ಅಭಿವೃದ್ಧಿಯನ್ನು ಗುರುತಿಸಿ ಕಾಲೇಜಿನ ಅಭಿಮಾನಿಗಳು ಸಲ್ಲಿಸುತ್ತಿರುವ ಗೌರವ ನಮಗೆ ಇನ್ನಷ್ಟು ಜವಾಬ್ದಾರಿಗಳನ್ನು ಹೆಚ್ಚಿಸಿದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಓಂಕಾರ ಮೇತ್ರೆ, ರವಿ ಗಂಗಾ, ಶೆಫಿವುಲ್ಲಾ, ಉಪನ್ಯಾಸಕರಾದ ಕಲ್ಲಪ್ಪ ಬುಟ್ಟೆ, ಶಿವಪುತ್ರ ಧರಣಿ, ಸುಧಾ ಕೌಟಿಗೆ, ಅಂಬಿಕಾ ವಿಶ್ವಕರ್ಮ, ವನದೇವಿ ಎಕ್ಕಳೆ, ಮೀರಾತಾಯಿ ಕಾಂಬಳೆ ಸೇರಿದಂತೆ ಇತರರಿದ್ದರು.