ಔರಾದ: ಸಾಧನೆಗೆ ಅಸಾಧ್ಯವಾದುದು ಯಾವುದೂ ಇಲ್ಲ. ಆದರೆ ಸಾಧಿಸುವ ಛಲ ಅಚಲವಾದ ಮನಸ್ಸು ಹಾಗೂ ದೃಢವಾದ ನಂಬಿಕೆ ನಮ್ಮಲ್ಲಿರಬೇಕು ಎಂದು ಜೆಸ್ಕಾಂ ಇಲಾಖೆಯ ಎಇಇ ರವಿ ಕಾರಬಾರಿ ಹೇಳಿದರು.
ತಾಲೂಕಿನ ಯನಗುಂದಾ ಗ್ರಾಮದ ಸರಕಾರಿ ಪ್ರೌಢ ಶಾಲೆಯಲ್ಲಿ ಈಚೇಗೆ ಹಮ್ಮಿಕೊಂಡ ರಾಷ್ಟ್ರಕವಿ ಕುವೆಂಪು ಅವರ ಜನ್ಮ ದಿನಾಚರಣೆ ನಿಮಿತ್ತ ವಿಶ್ವ ಮಾನವ ಸಂದೇಶ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ವಿದ್ಯಾರ್ಥಿಗಳು ಜೀವನದಲ್ಲಿ ಒಳ್ಳೆಯ ನಾಗರಿಕರಾಗಲು ಸತತ ಪರಿಶ್ರಮ ಅಗತ್ಯ. ವಿದ್ಯಾರ್ಥಿಯ ಜೀವನ ಬಂಗಾರದ ಜೀವನ ಅದನ್ನು ಸದುಪಯೋಗ ಪಡೆಸಿಕೊಂಡು ಒಳ್ಳೆಯ ಅಂಕ ಪಡೆದು ಪಾಲಕರಿಗೆ ಹಾಗೂ ಶಾಲೆಗೆ ಕೀರ್ತಿ ತರಬೇಕೆಂದು ಸಲಹೆ ನೀಡಿದರು. ಜಾನಪದ ಪರಿಷತ್ ತಾಲೂಕು ಅಧ್ಯಕ್ಷ ಡಾ. ಸಂಜುಕುಮಾರ ಜುಮ್ಮಾ, ಐಟಿಐ ಕಾಲೇಜಿನ ಪ್ರಾಂಶುಪಾಲ ಶಿವಶಂಕರ ಟೋಕರೆ ಮಾತನಾಡಿ, ರಾಷ್ಟ್ರಕವಿ ಕುವೆಂಪು ಅವರ ಆದರ್ಶವನ್ನು ಪಾಲಿಸಿದರೆ ವಿಶ್ವದಲ್ಲಿ ಶಾಂತಿ ನೆಲೆಸಲು ಸಾಧ್ಯವಾಗುತ್ತದೆ ಎಂದರು.
ಸಾಹಿತ್ಯದಲ್ಲಿ ಮೇರು ವ್ಯಕ್ತಿತ್ವ ಹೊಂದಿದ್ದ ಕುವೆಂಪು ಅವರು ಕಥೆ, ಕಾದಂಬರಿ, ಕವನ ಸಂಕಲ ಎಲ್ಲ ರೀತಿಯ ಸಾಹಿತ್ಯದ ಪ್ರಕಾರಗಳನ್ನು ರಚಿಸಿದ್ದಾರೆ. ನಿಸರ್ಗದಲ್ಲಿ ದೇವರನ್ನು ಕಂಡಿರುವ ಕುವೆಂಪು ಅವರು ಜಾತಿ, ಮತ, ಪಂಥವನ್ನು ಮೀರಿ ವಿಶ್ವಮಾನ ಸಂದೇಶವನ್ನು ಸಾರಿದ್ದಾರೆ ಎಂದರು.
ಶಾಲೆಯ ಮುಖ್ಯಗುರುಗಳಾದ ಶಾಮಸುಂದರ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಉಪನ್ಯಾಸಕ ಗಂಗಾರಾಮ ಬಸಪ್ಪ ನಾಗೂರೆ,ಎಸ್ಡಿಎಂಸಿ ಅಧ್ಯಕ್ಷ ಶಿವರಾಜ ಶೆಟಕಾರ, ಶಿಕ್ಷಕರಾದ ಮುಸ್ತಪಾ,ತೇಜೇಶ್ವಿ ಚಾಂದ್ ಕೌಟೆ,ಬಸವರಾಜ ಘೂಳೆ, ಜೆಇ ಗಣಪತಿ, ಶಿವಕುಮಾರ ಮಜಿಗೆ ಸೇರಿದಂತೆ ಅನೇಕರಿದ್ದರು.
ಅನಿಲಕುಮಾರ ಮಾಟೆ ಸ್ವಾಗತಿಸಿದರು. ಮಲ್ಲಿಕಾರ್ಜುನ ಟಂಕಸಾಲೆ ನಿರೂಪಿಸಿದರು. ಲಕ್ಷಣರಡ್ಡಿ ಗಂಗಾಪುರೆ ವಂದಿಸಿದರು.ಈ ವೇಳೆ ಪಿಎಚ್‌ಡಿ ಪದವಿ ಪಡೆದ ಡಾ. ಸಂಜುಕುಮಾರ ಜುಮ್ಮಾ, ಶಾಲೆಯ ಹಳೆ ವಿದ್ಯಾರ್ಥಿ ಗಂಗಾರಾಮ ನಾಗೂರೆ ಉಪನ್ಯಾಸಕರಾಗಿ ನೇಮಕವಾದ ಹಿನ್ನಲೆ ಸತ್ಕರಿಸಲಾಯಿತು.