ಔರಾದ್: ತಾಲೂಕಿನ ಕೊಳ್ಳೂರ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳಾದ ಒಂಬತ್ತನೇ ತರಗತಿಯ ಅಬ್ರಹಾಂ ಧರ್ಮಾ, ಶಿಲ್ಪಾ ಶಿವಾಜಿ, ಲತಿಫ್ ಹನಿಫ್, ಹತ್ತನೇ ತರಗತಿಯ ದರ್ಶನ ಅಶೋಕ, ರಬೆಕಾ ನಾಗನಾಥ, ಶಿಲ್ಪಾ ಸುಭಾಷ ಇವರು ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಖವಾಲಿಯಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆ ಯಾಗಿದ್ದಾರೆ.
ರಾಜ್ಯ ಮಟ್ಟಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳು ಇದೇ 7,8,9ರಂದು ಶಿವಮೊಗ್ಗದಲ್ಲಿ ಜರುಗಲಿರುವ ರಾಜ್ಯ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಪಾಲ್ಗೊಳ್ಳುವ ಮೂಲಕ ವಿದ್ಯಾರ್ಥಿಗಳು ಪ್ರದರ್ಶನ ನಿಡಿದ್ದಾರೆ. ವಿದ್ಯಾರ್ಥಿಗಳ ಸಾಧನೆಗೆ ಶಾಲೆಯ ಮುಖ್ಯ ಶಿಕ್ಷಕ ಸುರೇಶ್ ಪಾಂಡ್ರೆ, ಅಶೋಕ ಹೂಂಡಾಳೆ, ದತ್ತಾತ್ರಿ ಪಾಟೀಲ, ಜಯಮಾಲ, ವೈಶಾಲಿ ಪಾಠಕ, ಫಯಾಜಪಾಶಾ, ಪ್ರಶಾಂತ್ ಸಿಂಧೆ, ಪ್ರಕಾಶ್ ರಾಠೋಡ ಸೇರಿದಂತೆ ವಿದ್ಯಾರ್ಥಿಗಳು ಹರ್ಷ ವ್ಯಕ್ತಪಡಿಸಿದ್ದಾರೆ.