ಔರಾದ: ಗ್ರಾಮೀಣ ಭಾಗದಲ್ಲಿ ಸುಭಾಷ್ ಚಂದ್ರ ಬೋಸ್ ಶಾಲೆಯು ನೀಡಿದ ಶೈಕ್ಷಣಿಕ ಕೊಡುಗೆ ಶ್ಲಾಘನೀಯ. ಈ ಶಾಲೆಯಲ್ಲಿ ಕಲಿತ ಮಕ್ಕಳು ದೇಶ ವಿದೇಶದಲ್ಲಿ ಸೇವೆ ಸಲ್ಲಿಸುತ್ತಿದ್ದು, ಎಲ್ಲಾ ಕ್ಷೇತ್ರದಲ್ಲಿ ಗುರುತಿಸಿಕೊಂಡು ಉತ್ತಮ ಸಾಧನೆ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ಸುಧಾಕರ ಕೊಳ್ಳುರ ಹೇಳಿದರು.
ಔರಾದ ತಾಲೂಕಿನ ಸಂತಪುರ ಸುಭಾಷ್ ಚಂದ್ರಬೋಸ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಶಾಲಾ ದಿನದರ್ಶಿಕೆ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಈ ಸಂದರ್ಭದಲ್ಲಿ ಸಂಪನ್ಮೂಲ ಶಿಕ್ಷಕಿ ಸವಿತಾ ಪಾಟೀಲ, ಮನ್ಮಥ ಡೋಲೆ, ಸಂಸ್ಥೆಯ ಅಧ್ಯಕ್ಷ ಶಿವಾಜಿರಾವ್ ಬೋರಳೆ, ಮಲ್ಲಿಕಾರ್ಜುನ ಹಿಪ್ಪಳಗಾಂವೆ, ಶರಣಪ್ಪ ಬಿರಾದರ, ಗಣಪತಿ ವಾಸುದೇವ, ಸುಭಾಷ್ ಬಿರಾದರ, ಪ್ರಕಾಶ, ಪ್ರಿಯಾಂಕಾ, ಸಂತೋಷ ಸೇರಿದಂತೆ ವಿದ್ಯಾರ್ಥಿಗಳಿಗೆ ಉಪಸ್ಥಿತರಿದ್ದರು.