ಔರಾದ: ಕಲ್ಯಾಣ ಕರ್ನಾಟಕ ಪ್ರೌಢಶಾಲಾ ಶಿಕ್ಷಕರ ಸಂಘದ ಔರಾದ ತಾಲೂಕ ಅಧ್ಯಕ್ಷರಾಗಿ ಸರ್ವಾನುಮತದಿಂದ ಸರ್ಕಾರಿ ಪ್ರೌಢ ಶಾಲೆ ಯನಗುಂದ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ಮಲ್ಲಿಕಾರ್ಜುನ ಟಂಕಸಾಲೆ ಅವರನ್ನು ಆಯ್ಕೆ ಮಾಡಲಾಗಿದೆ.
ಪಟ್ಟಣದ ಜ್ಞಾನಗಂಗಾ ಶಾಲೆಯಲ್ಲಿ ಜಿಲ್ಲಾಧ್ಯಕ್ಷರು ಪಾಂಡುರಂಗ ಬೆಲ್ದಾರ ಅವರ ನೇತೃತ್ವದಲ್ಲಿ ತಾಲೂಕಿನ ಪ್ರೌಢ ಶಾಲಾ ಶಿಕ್ಷಕರ ಸಭೆ ಕರೆಯಲಾಗಿತ್ತು. ಸಭೆಯಲ್ಲಿ ಭಾಗವಹಿಸಿದ ಶಿಕ್ಷಕರು ಮಲ್ಲಿಕಾರ್ಜುನ ಟಂಕಸಾಲೆ ಅವರನ್ನು ಅಧ್ಯಕ್ಷರನ್ನಾಗಿ ಹಾಗೇ ಜಗನ್ನಾಥ ದೇಶಮುಖ ಉಪಾಧ್ಯಕ್ಷರಾಗಿ, ಪ್ರಶಾಂತ ಸೋಮವಂಶಿ ಅವರನ್ನು ಕಾರ್ಯದರ್ಶಿಯಾಗಿ ಅನಿಲ ಕಟ್ಟೆ ಖಜಾಂಚಿಯಾಗಿ, ರಾಜಕುಮಾರ ಹಲ್ಮಡಗೆ ಸಹ ಕಾರ್ಯದರ್ಶಿ ಮತ್ತು ಶಿವಾಜಿರಾವ ಚಿಟಗೇರೆ ಅವರನ್ನು ಸಂಘದ ಗೌರವಾಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ. ಸಭೆಯಲ್ಲಿ ಜಿಲ್ಲಾ ಸಂಘದ ಪದಾಧಿಕಾರಿಗಳು ದೇವಿಪ್ರಸಾದ ಕಲಾಲ, ಸಂಜುಕುಮಾರ ಸ್ವಾಮಿ, ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಜಿಲ್ಲಾ ಅಧ್ಯಕ್ಷ ಶಿವಕುಮಾರ ಸದಾಫೂಲೆ ಭಾಗವಹಿಸಿದರು.
ನಿವೃತ್ತ ಶಿಕ್ಷಕ ಶಿವಾಜಿರಾವ ಪಾಟೀಲ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಂಘದ ಗುರಿ ಉದ್ದೇಶಗಳ ಬಗ್ಗೆ ಮಾತನಾಡುತ್ತ ಕಲ್ಯಾಣ ಕರ್ನಾಟಕದಲ್ಲಿ ಶಿಕ್ಷಕರ ಬಡ್ತಿ, ವರ್ಗಾವಣೆ ಸೇರಿದಂತೆ ಹಲವು ಸಮಸ್ಯೆಗಳು ಬಗೆಹರಿಸುವ ಗುರಿ ಉದ್ದೇಶಗಳನ್ನು ಹೊಂದಲಾಗಿದೆ ಎಂದು ತಿಳಿಸಿದರು.
ಸಭೆಯಲ್ಲಿ ತಾಲೂಕಿನ ಶಿಕ್ಷಕರಾದ ಶಾಮಸುಂದರ ಖಾನಾಪೂರಕರ್, ಸೂರ್ಯಕಾಂತ ಶಿಂಗೆ, ಪಂಡರಿ ಆಡೆ, ಗಜಾನನ ಮಳ್ಳಾ, ಸಂಗ್ರಾಮ ಪವಾರ, ಪ್ರಶಾಂತ ಪಾಟೀಲ, ಶಿವಕುಮಾರ ನಿಟ್ಟೂರೆ, ಪಂಡರಿ ಸಾಕರೆ, ರಾಜಕುಮಾರ ನಾಯಕವಾಡೆ ಸೇರಿದಂತೆ 100ಕ್ಕೂ ಅಧಿಕ ಶಿಕ್ಷಕರು ಸಭೆಯಲ್ಲಿ ಭಾಗವಹಿಸಿದರು.
ಟಂಕಸಾಲೆ ಆಯ್ಕೆಗೆ ಡಾ.ಧನರಾಜ ರಾಗಾ, ಅಮೃತರಾವ ಬಿರಾದಾರ, ಕಲ್ಯಾಣರಾವ ಶೆಂಬೆಳ್ಳೆ, ಪ್ರವೀಣ ಸ್ವಾಮಿ, ಡಿ.ಡಿ.ಬೊಳಗಾವೆ, ಸೂರ್ಯಕಾಂತ ಕಳಸೆ, ಸಂದೀಪ ಪಾಟೀಲ, ವೀರೇಶ ಅಲ್ಮಾಜೆ, ಸಂತೋಷ ಚಾಂಡೇಸೂರೆ, ಬಾಲಾಜಿ ಸೂರ್ಯವಂಶಿ, ಬಾಲರಾಜ ಎಂಡೆ, ಶರಣಪ್ಪಾ ಚಿಟಮೆ, ಬಾಲಾಜಿ ಕಂಬಾರ, ರವಿ ಡೋಳೆ, ಸಾಯಿನಾಥ ವಾಘಮಾರೆ ಮುಂತಾದವರು ಅಭಿನಂದನೆ ಸಲ್ಲಿಸಿದ್ದಾರೆ.