ಔರಾದ: ಅಂಕಗಳ ಜೊತೆಗೆ ಜೀವನ ಮೌಲ್ಯಗಳು ಅತ್ಯಗತ್ಯ. ವಿದ್ಯಾರ್ಥಿಗಳು ಅಹಂಕಾರ ಪಡದೆ ವಿದ್ಯೆಯನ್ನು ಪಡೆಯುತ್ತಾ ವಿನಯವಾಗಿರಬೇಕು ಎಂದು ಬೀದರ್ ಲಕ್ಷ್ಮೀಬಾಯಿ ಕಮಠಾಣೆ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕಿ ಲತಾ ದಂಡೆ ಹೇಳಿದರು.
ತಾಲೂಕಿನ ಸಂತಪೂರ ಸಿದ್ದರಾಮೇಶ್ವರ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ವ್ಯಕ್ತಿತ್ವ ವಿಕಸನ ಕಾರ್ಯಗಾರ ಹಾಗೂ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಬಿಳ್ಕೊಡುಗೆ ಸಮಾರಂಭದಲ್ಲಿ ಅವರು ಮಾತನಾಡಿದರು. ಕಠಿಣ ಪರಿಸ್ಥಿತಿಯನ್ನು ಎದುರಿಸುವ ಛಲವನ್ನು ವಿದ್ಯಾರ್ಥಿ ಬೆಳೆಸಿಕೊಳ್ಳಬೇಕು. ವಿದ್ಯಾರ್ಥಿಗಳು ಮತ್ತು ಕಾಲೇಜಿನ ಸಂಬಂಧದ ಕೊಂಡಿ ಎಂದಿಗೂ ಕಳಚಬಾರದು. ಗುರಿ, ಏಕಾಗ್ರತೆ, ಶಿಕ್ಷಣದಿಂದ ದೊಡ್ಡ ಸಾಧನೆಗೈದು ದೇಶ ಸೇವೆ ನೀಡಬೇಕು ಎಂದು ಹೇಳಿದರು.
ಪ್ರಾಂಶುಪಾಲ ನವೀಲಕುಮಾರ ಉತ್ಕಾರ ಮಾತನಾಡಿ, ವಿದ್ಯಾರ್ಥಿಗಳು ಫಲಿತಾಂಶಗಳ ಮೂಲಕ ಕಲೆತ ಕಾಲೇಜು ಮತ್ತು ಪಾಲಕರಿಗೆ ಗೌರವ ತರಬೇಕು. ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ ಫಲಿತಾಂಶ ಉತ್ತಮವಾಗಿ ಬರಲಿ ಶುಭ ಹಾರೈಸಿದರು.
ಅನುಭವ ಮಂಟಪ ಗುರುಕುಲ ಪ್ರೌಢಶಾಲೆಯ ಮುಖ್ಯ ಗುರುಗಳಾದ ಶಿವಕುಮಾರ ಹಿರೇಮಠ, ಗುರುಪ್ರೀತ್ ಕೌರ್, ಉಪನ್ಯಾಸಕರಾದ ಕಲ್ಲಪ್ಪ ಬುಟ್ಟೆ, ಶಿವಪುತ್ರ ಧರಣಿ, ಸುಧಾ ಕೌಟಿಗೆ, ಅಂಬಿಕಾ ವಿಶ್ವಕರ್ಮ, ವನದೇವಿ ಎಕ್ಕಳೆ, ಮೀರಾತಾಯಿ ಕಾಂಬಳೆ ಇತರರಿದ್ದರು.