News Karnataka
ಸಿಟಿಜನ್ ಕಾರ್ನರ್

ತಂದೆ ತಾಯಿ ಇಲ್ಲದ ಬಾಲಕಿಯ ಶಿಕ್ಷಣಕ್ಕೆ ಬೇಕಿದೆ ಸಹಾಯಹಸ್ತ

A girl without her parents needs help in her education
Photo Credit : Ravi Mathapati

ಔರಾದ: ಹತ್ತನೇ ತರಗತಿಯಲ್ಲಿ ಪ್ರತಿಶತ 92.48%ರಷ್ಟು ಫಲಿತಾಂಶದ ಮೂಲಕ ಅಗ್ರಶ್ರೇಣಿಯಲ್ಲಿ ಪಾಸಾದ ಪ್ರತಿಭಾವಂತ ವಿದ್ಯಾರ್ಥಿನಿ ಆರ್ಥಿಕ ಸಮಸ್ಯೆಯಿಂದ ಶಿಕ್ಷಣ ಅರ್ಧಕ್ಕೆ ಮೊಟುಕುಗೊಳಿಸುವ ಪರಿಸ್ಥಿತಿ ನಿರ್ಮಾಣವಾಗಿದೆ.

ತಾಲೂಕಿನ ಯನಗುಂದಾ ಸರಕಾರಿ ಪ್ರೌಢ ಶಾಲೆಯ ವಿದ್ಯಾರ್ಥಿ ಬಸವಜ್ಯೋತಿ ಬಾಬುಗೊಂಡ ಹತ್ತನೇ ತರಗತಿಯಲ್ಲಿ ಪ್ರತಿಶತ 92.48%ರಷ್ಟು ಫಲಿತಾಂಶದ ಮೂಲಕ ಅಗ್ರಶ್ರೇಣಿಯಲ್ಲಿ ಉತ್ತೀರ್ಣಳಾಗಿದ್ದಾಳೆ, ಆದರೆ ಮುಂದೆ ಪಿಯುಸಿ ಸೇರಲು ಆಕೆಯ ಬಳಿ ಹಣ ವಿಲ್ಲ. ಪ್ರತಿಭಾವಂತ ವಿದ್ಯಾರ್ಥಿ ಆಗಿದರೂ ಕೌಟುಂಬಿಕ ಸಮಸ್ಯೆ ಹಾಗೂ ಬಡತನದ ಕಾರಣದಿಂದ ಮುಂದಿನ ವ್ಯಾಸಂಗದ ದಿಕ್ಕು ತೋಚದಂತಾಗಿದೆ. ಬಸವಜ್ಯೋತಿಗೆ ತಾನು ಚೆನ್ನಾಗಿ ಓದಬೇಕು, ಉನ್ನತ ಹುದ್ದೆ ಪಡೆದು ಸಮಾಜ ಸೇವೆ ಸಲ್ಲಿಸಬೇಕು ಎನ್ನುವ ಕನಸಿದೆ ಆದರೆ ಆಕೆಗೆ ತನ್ನ ಮುಂದಿನ ವಿದ್ಯಾಭ್ಯಾಸದ ಹೇಗೆ ಎನ್ನುವುದೇ ದೊಡ್ಡ ಚಿಂತೆಯಾಗಿ ಕಾಡುತ್ತಿದೆ. ಬಸವಜ್ಯೋತಿ ಗರ್ಭದಲ್ಲಿ ಇರುವಾಗಲೇ ತಂದೆಯನ್ನು ಕಳೆದುಕೊಂಡಳು, ತಾಯಿ ಮಗಳನ್ನು ಅಜ್ಜಿ ಜ್ಞಾನಬಾಯಿ ಅಜ್ಜ ಜ್ಞಾನಗೊಂಡ ಅವರಲ್ಲಿ ಬಿಟ್ಟು ಹೋಗಿದ್ದಾಳೆ, ಸದ್ಯಕ್ಕೆ ಬಸವಜ್ಯೋತಿಯ ಪಾಲಿಗೆ ಅಜ್ಜ, ಅಜ್ಜಿಯೇ ತಂದೆ ತಾಯಿ. ವಯಸ್ಸಾದ ಜೀವಕ್ಕೆ ಮೊಮ್ಮಗಳು ಪ್ರತಿಭಾವಂತೆ ಆಗಿದ್ದರೂ ಮುಂದೆ ವಿದ್ಯಾಭ್ಯಾಸ ಮಾಡಿಸಲಾಗದ ಅಸಹಾಯಕ ಪರಿಸ್ಥಿತಿ.

ಬಸವಜ್ಯೋತಿಯ ಅಜ್ಜ ಜ್ಞಾನಗೊಂಡ ಅವರ ಆರ್ಥಿಕ ಪರಿಸ್ಥಿತಿ ಅಷ್ಟೇನು ಸರಿಯಿಲ್ಲ. ಹೊಟ್ಟೆ ತುಂಬಿದರೆ ಸಾಕು ಎನ್ನುವ ಬಡತನ ಯಾವುದೇ ಆಸ್ತಿ ಇಲ್ಲ, ವಯಸ್ಸಿನ ಕಾರಣ ದುಡಿಯಲು ಶಕ್ತಿ ಇಲ್ಲದ ಸ್ಥಿತಿ, ಗ್ರಾಮದ ಹೊರ ವಲಯದಲ್ಲಿ ಗುಡಿಸಲು ಹಾಕಿಕೊಂಡು ವಾಸವಾಗಿದ್ದಾರೆ, ಅಜ್ಜನಿಗೆ ಮೊಮ್ಮಗಳದೇ ಚಿಂತೆ. ಸದ್ಯ ಪ್ರತಿಭಾವಂತ ವಿದ್ಯಾರ್ಥಿ ಬಸವಜ್ಯೋತಿ ವಿಧ್ಯಾಭ್ಯಾಸಕ್ಕೆ ಸಮಾಜದ ಪ್ರಜ್ಞಾವಂತರ ಆಶ್ರಯದ ಅವಶ್ಯಕತೆ ಇದೆ. ಬಸವಜ್ಯೋತಿ ಪ್ರತಿಭಾವಂತ ಮಗಳು, ಉತ್ತಮ ಸ್ವಭಾವ ಮತ್ತು ಅಧ್ಯಯನಶಿಲತೆ ಮೈಗೂಡಿಸಿಕೊಂಡ ಈಕೆಗೆ ಪ್ರಜ್ಞಾವಂತರು ಸಹಾಯ ಮಾಡಿದ್ದರೆ ಭವಿಷ್ಯದಲ್ಲಿ ಉನ್ನತ ಸಾಧನೆ ಮಾಡುತ್ತಾಳೆ ಎನ್ನುವ ವಿಶ್ವಾಸ ವ್ಯಕ್ತ ಪಡಿಸುತ್ತಾರೆ ಮುಖ್ಯಗುರು ಶಾಮಸುಂದರ ಖಾನಪೂರಕರ್.

ಸದ್ಯ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಬಡತನ ಮತ್ತು ಕೌಟುಂಬಿಕ ಸಮಸ್ಯೆ ಅಡ್ಡಿ ಆಗಬಾರದು, ಸಮಾಜದ ಪ್ರಜ್ಞಾವಂತರು, ದಾನಿಗಳು ಸಹಾಯ ಹಸ್ತ ನೀಡಿದ್ದರೆ ಈ ಮಗಳ ಭವಿಷ್ಯ ಉಜ್ವಲವಾಗಲಿದೆ. ಪ್ರತಿಭೆಯುಳ್ಳ ವಿದ್ಯಾರ್ಥಿ ಬಸವಜ್ಯೋತಿ ಬಾಬುಗೊಂಡ ಅವರ ಮುಂದಿನ ಶಿಕ್ಷಣ ಜೀವನಕ್ಕೆ ಸಹಾಯ ಮಾಡಲು ಇಚ್ಛೆಸುವವರು ದೂರವಾಣಿ ಸಂಖ್ಯೆ 9353419036 ಗೆ ಕರೆ ಮಾಡಿ ಮಾಹಿತಿ ಪಡೆಯಬಹುದು. ನೇರವಾಗಿ ಹಣಕಾಸಿನ ಸಹಾಯ ಮಾಡುವವರು ಬಸವಜ್ಯೋತಿ ಬಾಬುಗೊಂಡ ಇವರ ಬ್ಯಾಂಕ್ ಖಾತೆ ಸಂಖ್ಯೆ – 62374226920

SBI AURAD.
IFSC CODE – 0020240 ಹಣಕಾಸಿನ‌ ನೇರವು ನೀಡಬಹುದು.

Ravi Mathapati

Read More Articles
MANY DROPS MAKE AN OCEAN
Support NewsKarnataka's quality independent journalism with a small contribution.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *