ಔರಾದ: ಕೃಷಿ ಕ್ಷೇತ್ರವೂ ಸೇರಿದಂತೆ ಎಲ್ಲಾ ಕ್ಷೇತ್ರದಲ್ಲಿಯೂ ಮಹಿಳೆ ಗಮನಾರ್ಹ ಸಾಧನೆ ಮಾಡಿದ್ದು ಮಾದರಿಯಾಗಿದ್ದಾಳೆ ಎಂದು ದುಪ್ಪತಮಹಾಗಾಂವ ಗ್ರಾಮ ಪಂಚಾಯತ್ ಅಧ್ಯಕ್ಷ ಶ್ರೀನಿವಾಸ ಜೊನ್ನೆಕೆರೆ ಹೇಳಿದರು.
ತಾಲೂಕಿನ ಸಂತಪೂರ ಸಿದ್ದರಾಮೇಶ್ವರ ಪದವಿ ಪೂರ್ವ ಕಾಲೇಜಿನಲ್ಲಿ ಮಂಗಳವಾರ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪ್ರಾಂಶುಪಾಲ ನವೀಲಕುಮಾರ ಉತ್ಕಾರ್ ಮಾತನಾಡಿ, ಮಹಿಳಾ ದಿನಾಚರಣೆ ಆಚರಿಸುವ ಮುಖ್ಯ ಉದ್ದೇಶ ಮಹಿಳೆಯರಿಗೆ ಗೌರವ ಮತ್ತು ಪ್ರೋತ್ಸಾಹ ನೀಡುವುದಾಗಿದೆ. ಮಹಿಳೆಯರು ಕಠಿಣ ಪರಿಶ್ರಮದಿಂದ ಮೆಚ್ಚುಗೆ ಜೊತೆಗೆ ಮಹಿಳಾ ಸಾಧಕೀಯರಾಗಿ ಗೌರವ ಪಡೆಯುತ್ತಿದ್ದಾರೆ. ಮಹಿಳಾ ದಿನಾಚರಣೆ ಒಂದು ದಿವಸ ಮಾತ್ರ ಮಹಿಳೆಯರಿಗೆ ಗೌರವ ನೀಡದೆ, ಪ್ರತಿದಿನ ಮಹಿಳೆಯರಿಗೆ ಗೌರವದಿಂದ ಕಾಣಿದಾಗ ಮಾತ್ರ ದೇಶ ನಿಜ ಸ್ವತಂತ್ರವಾಗಿರುತ್ತದೆ ಎಂದು ಹೇಳಿದರು.
ಸ್ವಚ್ಛ ಸುಜಲ್ ಶಕ್ತಿ ಸುಮ್ಮಾನ್ ಪ್ರಶಸ್ತಿ ಪುರಸ್ಕೃತ ಗೀತಾ ಪವಾರ್, ಮುಖ್ಯ ಗುರುಗಳಾದ ಶಿವಕುಮಾರ ಹೀರೆಮಠ ಮಾತನಾಡಿದರು. ಈ ಸಂದರ್ಭದಲ್ಲಿ ಸ್ವಚ್ಛ ಸುಜಲ್ ಶಕ್ತಿ ಸುಮ್ಮಾನ್ ಪ್ರಶಸ್ತಿ ಪುರಸ್ಕೃತ ಗೀತಾ ಪವಾರ್ ಕಾಲೇಜು ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಈ ವೇಳೆ ವಿನೋದ ಪವಾರ್, ಉಪನ್ಯಾಸಕರಾದ ಕಲ್ಲಪ್ಪ ಬುಟ್ಟೆ, ಶಿವಪುತ್ರ ಧರಣಿ, ಸುಧಾ ಕೌಟಿಗೆ, ಅಂಬಿಕಾ ವಿಶ್ವಕರ್ಮ, ವನದೇವಿ ಎಕ್ಕಳೆ, ಸುರೇಖಾ ದಡ್ಡೆ ಉಪಸ್ಥಿತರಿದ್ದರು.