ಔರಾದ: ಶರಣೆ ಅಕ್ಕಮಹಾದೇವಿಯವರು ಪ್ರಥಮ ಕನ್ನಡ ಕವಿಯಿತ್ರಿ, ಲೌಕಿಕ ಜಗತ್ತನ್ನು ಧಿಕ್ಕರಿಸಿ ದೃಢ ನಿರ್ಧಾರದಿಂದ ಚೆನ್ನಮಲ್ಲಿಕಾರ್ಜುನನ್ನು ಕಾಣಲು ಹೊರಟಿದ ಶರಣೆಯಲ್ಲಿ ಅಗ್ರಮಾನ್ಯರೆಂದು ಔರಾದ ಜಾನಪದ ಸಾಹಿತ್ಯ ಪರಿಷತ್ ತಾಲೂಕ ಅಧ್ಯಕ್ಷರಾದ ಡಾ. ಸಂಜೀವಕುಮಾರ ಜುಮ್ಮಾ ಹೇಳಿದರು.
ಜೊನ್ನೆಕೇರಿ ಶ್ರೀಗುರು ಪತ್ರಿ ಸ್ವಾಮಿ ಸಂಸ್ಥಾನ ಮಠದಲ್ಲಿ ನಡೆದ ಅಕ್ಕಮಹಾದೇವಿಯವರ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಆಧುನಿಕ ಯುಗದ ಮಹಿಳೆಯರಿಗೆ ಅಕ್ಕ ಮಹಾದೇವಿಯವರು ಆದರ್ಶರು ಮತ್ತು ಮಾರ್ಗದರ್ಶಕರು, ಅವರ ದಾರಿಯಲ್ಲಿ ನಡೆದರೆ ಕೌಟುಂಬಿಕ ಹಾಗೂ ನೈಜ ಜೀವನದ ಸಮಸ್ಯೆಗಳನ್ನು ಸಮರ್ಥವಾಗಿ ಎದುರಿಸಬಹುದು ಎಂದರು.
ಕಲ್ಯಾಣರಾವ ಬಿರಾದರ ಮತ್ತು ಪ್ರಭುರಾವ ಪಾಟೀಲ್ ಅಕ್ಕಮಹಾದೇವಿಯವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಮನೋಹರ್ ಲ್ಯಾಂಡೆ, ನವೀಲಕುಮಾರ ಉತ್ಕಾರ, ಸುನಿತಾ ಪಾಟೀಲ, ಲಕ್ಷ್ಮೀಬಾಯಿ ಸ್ವಾಮಿ, ಕಂಬಳಮ್ಮಾ ಕುಣಿಕೇರ, ಶಿವಕಾಂತ್ ಕೋಳಿ, ಶಿವಕುಮಾರ ಹೊನ್ನಶೆಟ್ಟಿ, ಪ್ರಶಾಂತ, ಲಿಂಗು, ಗುಂಡಪ್ಪ ಸದಾನಂದ, ಚಂದ್ರಕಾಂತ ಶೆಂಬೆಳ್ಳಿ, ಹಾವಗಿರಾವ ಶೆಂಬೆಳ್ಳಿ ಸೇರಿದಂತೆ ಇತರರು ಇದ್ದರು.