ಔರಾದ: ಪಟ್ಟಣದ ಶಿಕ್ಷಕರ ಕಾಲೋನಿಯಲ್ಲಿನ ಅಂಗನವಾಡಿ ಕೇಂದ್ರದಲ್ಲಿ ಇತ್ತೀಚೆಗೆ ಸೆಪ್ಟಿಕ್ ಟ್ಯಾಂಕ್‌ನಲ್ಲಿ ಮಗು ಬಿದ್ದು ಸಾವನ್ನಪ್ಪಿದ ಘಟನೆಗೆ ಸಂಬಂಧಿಸಿದಂತೆ ಘಟನೆ ನಡೆದು ತಿಂಗಳಾದರೂ ಅಂಗನವಾಡಿ ಕೇಂದ್ರದ ಬೀಗ ತೆರೆದಿಲ್ಲ.
ಫೆಬ್ರವರಿ ಮೊದಲ ವಾರದಲ್ಲಿ ಅಂಗನವಾಡಿ ಆವರಣದಲ್ಲಿದ್ದ ಸೆಪ್ಟಿಕ್ ಟ್ಯಾಂಕ್‌ನಲ್ಲಿ ಆಯ ತಪ್ಪಿ ಬಿದ್ದು ಮಗು ಸಾವನ್ನಪ್ಪಿತ್ತು. ಅದಾದ ಬಳಿಕ ಮಕ್ಕಳು ಹೆದರಿಕೊಂಡು ತಿಂಗಳಾದರೂ ಅಂಗನವಾಡಿ ಕಡೆಗೆ ಮುಖ ಮಾಡುತ್ತಿಲ್ಲ. ಅಂದಿನಿಂದ ಹಾಕಿದ ಬೀಗ ಹಾಗೇ ಇದೆ. ಈ ಬಗ್ಗೆ ಶಿಶು ಅಭಿವೃದ್ಧಿ ಯೋಜನೆ ಅಧಿಕಾರಿಗಳು ಓಣಿಯಲ್ಲಿ ಓಡಾಡಿ ಮಕ್ಕಳ ಪೋಷಕರಿಗೆ ಧೈರ್ಯ ತುಂಬುವ ಕೆಲಸ ಮಾಡಬೇಕು. ಇಲ್ಲದಿದ್ದರೆ ಪ್ರತಿಭಟನೆ ನಡೆಸಲಾಗುವುದು ಎಂದು ಸಾಮಾಜಿಕ ಕಾರ್ಯಕರ್ತ ರತ್ನದೀಪ್ ಕಸ್ತೂರೆ ಒತ್ತಾಯಿಸಿದ್ದಾರೆ.