ಔರಾದ: ಔರಾದ ತಾಲೂಕಿನಾದ್ಯಂತ ಪ್ರಯಾಣಿಕರ ಅನುಕೂಲಕ್ಕಾಗಿ ಹೆಚ್ಚುವರಿ ಸಾರಿಗೆ ಬಸ್ ಗಳನ್ನು ಒದಗಿಸುವಂತೆ ಕರವೇ ಔರಾದ ಸಾರಿಗೆ ಇಲಾಖೆ ವ್ಯವಸ್ಥಾಪಕರಿಗೆ ಮನವಿ ಪತ್ರ ಸಲ್ಲಿಸಿದರು.
ಕರವೇ ತಾಲೂಕು ಅಧ್ಯಕ್ಷ ಅನೀಲ್ ದೇವಕತ್ತೆ ಮಾತನಾಡಿ, ತಾಲೂಕಿನಲ್ಲಿ ಸಾರಿಗೆ ವ್ಯವಸ್ಥೆ ಅಸಮರ್ಪಕವಾಗಿದ್ದು, ಖಾಸಗಿ ಬಸ್ಸುಗಳ ಲಾಬಿ ಹೆಚ್ಚುತ್ತಿದೆ. ಗ್ರಾಮೀಣ ಬಡ ಜನತೆ ಇದರಿಂದಾಗಿ ತಮ್ಮ ಮೂಲ ಸೌಕರ್ಯವನ್ನೇ ಕಳೆದುಕೊಂಡಿದೆ. ಖಾಸಗಿ ವಾಹನಗಳಲ್ಲಿ ಪ್ರಯಾಣಿಸಿದರೆ ಪ್ರಯಾಣಿಕರಲ್ಲಿ ದುಬಾರಿ ಹಣ ಕೀಳುತ್ತಿದ್ದಾರೆ ಇದರಿಂದ ಬಡ, ಮಧ್ಯಮ ವರ್ಗದ ಜನ ರೋಸಿಹೋಗಿದ್ದಾರೆ. ಆದ್ದರಿಂದ ಹೆಚ್ಚುವರಿ ಸಾರಿಗೆ ಬಸ್ ಒದಗಿಸಬೇಕು ಇಲ್ಲವಾದಲ್ಲಿ ಬರುವ ಸೋಮವಾರದಂದು ಬಸ್ ನಿಲ್ದಾಣಕ್ಕೆ ಮುತ್ತಿಗೆ ಹಾಕಿ ಉಗ್ರವಾದ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಕರವೇ ತಾಲೂಕಾ ಗೌರವ ಅಧ್ಯಕ್ಷ ಬಸವರಾಜ ಶೇಟಕರ, ನರ್ಸಿಂಗ್ ಹಕ್ಕೆ, ಅರ್ಜುನ್ ಬಂಗೆ, ಮುನ್ನು ಹಕ್ಕೆ, ಬಾಬು ರಾಠೋಡ್, ದತ್ತು ಮುದ್ದಾಳೆ, ಪಾಂಡುರಂಗ ಕಾಳೆ ಸೇರಿದಂತೆ ಕರವೇ ಕಾರ್ಯಕರ್ತರು ಉಪಸ್ಥಿತರಿದ್ದರು.