ಔರಾದ: ಸೋನಾಳ ಗ್ರಾಮದಲ್ಲಿ ಕೆಲವು ದಿನಗಳ ಹಿಂದೆ ಅನಾರೋಗ್ಯದಿಂದ ಇಸ್ಮಾಯಿಲಸಾಬ್ ಅವರ ಪುತ್ರ ಹಾಜಿಸಾಬ್ ಮರಣ ಹೊಂದಿದ್ದರು. ಲಕ್ಷ್ಮಿಬಾಯಿ ಅವರ ಪತಿ ಮನೋಹರ, ಸುಶ್ಮಿತಾ ಅವರ ಪತಿ ಶರಣಪ್ಪಾ ಹೃದಯಾಘಾತದಿಂದ ಮತ್ತು ಗೋಪಾಲರಾವ ಪಾಟೀಲ ಅವರ ಪುತ್ರ ಸಿದ್ದು ಆಕಸ್ಮಿಕವಾಗಿ ಮೃತಪಟ್ಟಿದ್ದರು. ಸಚಿವರು ಇವರ ಮನೆಗಳಿಗೆ ಭೇಟಿ ನೀಡಿ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದರು.
ಇದೇ ವೇಳೆ ಕುಟುಂಬಸ್ಥರ ಸಮಸ್ಯೆಗಳನ್ನು ಆಲಿಸಿ, ವೈಯಕ್ತಿಕ ಧನಸಹಾಯ ಮಾಡಿದರು. ನಿಮ್ಮ ನೆರವಿಗೆ ನಾನು ಸದಾ ಸಿದ್ದನಿದ್ದೇನೆ. ಏನೆ ಸಮಸ್ಯೆಗಳಿದ್ದರೂ ಸಂಕೋಚವಿಲ್ಲದೇ ತಮ್ಮನ್ನು ಭೇಟಿಯಾಗಿ. ಅಗತ್ಯ ನೆರವು ನೀಡಲಾಗುವುದು. ಸರ್ಕಾರದ ಯೋಜನೆಗಳಡಿ ಅವಶ್ಯಕ ಸೌಲಭ್ಯ ಒದಗಿಸಲು ಪ್ರಯತ್ನಿಸಲಾಗುವುದು ಎಂದು ಧೈರ್ಯ ತುಂಬಿದರು. ಈ ಸಂದರ್ಭದಲ್ಲಿ ಬಂಟಿ ರಾಂಪುರೆ, ಶಿವಾನಂದ ವಡ್ಡೆ, ಶಿವಕುಮಾರ ಝುಲ್ಫೆ, ನಾಗೇಶ ಪತ್ರೆ, ರಾಜಕುಮಾರ ಅಲಬಿದೆ, ಕೇರಬಾ ಪವಾರ, ಸಂತೋಷ ಪೋಕಲವಾರ ಸೇರಿದಂತೆ ಇತರರು ಉಪಸ್ಥಿತರಿದ್ದರು.