ಔರಾದ: ಹರೆಯದಲ್ಲಿ ಪಂಚೇಂದ್ರಿಯಗಳ ನಿಗ್ರಹ ಮಾಡಿಕೊಂಡವನೇ ಜೀವನದಲ್ಲಿ ಯಶಸ್ಸು ಗಳಿಸಲಿಕ್ಕೇ ಸಾಧ್ಯವಾಗುತ್ತದೆ. ಅಸುರಕ್ಷತೆ ಲೈಂಗಿಕ ಕ್ರಿಯೆಯಿಂದಾಗಿ ಹಾಗೂ ಬದಲಾಯಿಸದೇ ಇರುವ ಚುಚ್ಚುಮದ್ದಿನಿಂದ ಭಯಾನಕ ರೋಗ ಎಚ್‌ಐವಿ/ ಏಡ್ಸ್ ಹರಡುತ್ತದೆ ಎಂದು ಸಾರ್ವಜನಿಕ ಆಸ್ಪತ್ರೆ ಔರಾದನ ವೈದ್ಯಾಧಿಕಾರಿ ಡಾ. ರಮಣ ಪೋಕಲವಾರ ಹೇಳಿದರು.
ಪಟ್ಟಣದ ಬಸವ ಗುರುಕುಲ ಆವರಣದಲ್ಲಿರುವ ಶ್ರೀ ಬಸವೇಶ್ವರ ಡಿ.ಎಡ್ ಕಾಲೇಜು ಹಾಗೂ ಸಾರ್ವಜನಿಕ ಆಸ್ಪತ್ರೆ ಔರಾದನ “ರೆಡ್ ರಿಬ್ಬನ್ ಘಟಕ”ದ ಸಹಯೋಗದಲ್ಲಿ “ಎಚ್‌ಐವಿ/ಏಡ್ಸ್ ಅರಿವು ಕಾರ್ಯಕ್ರಮದಲ್ಲಿ ಮಾತನಾಡಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಸಾರ್ವಜನಿಕ ಆಸ್ಪತ್ರೆಯ ಐಸಿಟಿಸಿ ಆಪ್ತ ಸಮಾಲೋಚಕಿ ಶ್ರೀಮತಿ ಪುಷ್ಪಾಂಜಲಿ ಪಾಟೀಲ ಎಚ್‌ಐವಿ/ ಏಡ್ಸ್ ವಾಸಿಯಾಗದ ರೋಗವಾಗಿದ್ದು ಎಚ್ಚರದಿಂದಿರಬೇಕು ಎಂದು ಕಿವಿಮಾತು ಹೇಳಿದರು.
ಏಕಲಾರ ಸರಕಾರಿ ಪ್ರಾಥಮಿಕ ಶಾಲೆಯ ಹಿರಿಯ ಶಿಕ್ಷಕ ಬಾಲಾಜಿ ಅಮಾರವಾಡಿ ಮುಖ್ಯ ಅತಿಥಿಗಳಾಗಿ ಮಾತನಾಡಿ, ಸಮಾಜ ಕಟ್ಟಲು ಹೊರಟಿರುವ ಡಿ.ಎಡ್ ತರಬೇತಿಯ ಭಾವಿ ಶಿಕ್ಷಕರಾದ ನೀವುಗಳು ತಾವು ಎಚ್ಚರದಿಂದ ಇದ್ದು ಸಮಾಜಕ್ಕೆ ಜಾಗೃತರಾಗಲು ಹೇಳಬೇಕೆಂದು ಸಲಹೆ ನೀಡಿದರು.
ಸ್ಥಳೀಯ ಕಾರ್ಯದರ್ಶಿಗಳಾದ ಮನ್ಮತಪ್ಪ ಹುಗ್ಗೆ ಅಧ್ಯಕ್ಷತೆ ವಹಿಸಿದ್ದರು. ಪ್ರಾಂಶುಪಾಲರಾದ ಶರಣಪ್ಪ ನೌಬಾದೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಐಟಿಐ ಕಾಲೇಜಿನ ಪ್ರಾಂಶುಪಾಲ ಸತೀಶ ಗಂದಿಗುಡೆ, ಇಂದುಮತಿ ಎಡವೇ, ಅಂಬಿಕಾ, ಅಮರ ಪ್ಯಾಡೆ, ಸುರೇಖಾ ಮೆಂಗಾ, ಸಂಜೀವ ವಲಾಂಡೆ, ರೇಖಾ ನೌಬಾದೆ, ವಾಮನರಾವ ಮಾನೆ ಉಪಸ್ಥಿತರಿದ್ದರು. ಹಿರಿಯ ಶಿಕ್ಷಕ ನಾಗನಾಥ ಶಂಕು, ಉಪನ್ಯಾಸಕಿ ಸುರೇಖಾ ಮೆಂಗಾ, ಡಿ.ಎಡ್ ಮತ್ತುಐಟಿಐ ಕಾಲೇಜಿನ ವಿದ್ಯಾರ್ಥಿಗಳು ಹಾಜರಿದ್ದರು.