ಔರಾದ: ತಾಲೂಕಿನ ವಡಗಾಂವ ದೇ ಗ್ರಾಮದಲ್ಲಿ ರಾಷ್ಟ್ರೀಯ ಬಸವದಳ ವತಿಯಿಂದ ಸಡಗರ ಸಂಭ್ರಮದಿಂದ ಬಸವ ಜಯಂತಿ ಆಚರಣೆ ಮಾಡಲಾಯಿತು.
ಬಸವೇಶ್ವರ ಫೋಟೊ, ಪ್ರತಿಮೆ ಹಾಗೂ ಪುತ್ಥಳಿಗಳಿಗೆ ಪೂಜಾ ಕಾರ್ಯಕ್ರಮ ನಡೆಯಿತು. ಬೆಳಗ್ಗೆ 9 ಗಂಟೆಗೆ ಗ್ರಾಮದ ಮಹಿಳೆಯರಿಂದ ಬಸವಣ್ಣನವರ ತೊಟ್ಟಿಲು ಕಾರ್ಯಕ್ರಮ ಜರುಗಿತು. ವಡಗಾಂವದಿಂದ ಸಂತಪುರನ ಅನುಭವ ಮಂಟಪದವರೆಗೆ ನೂರಾರು ಸಂಖ್ಯೆಯಲ್ಲಿ ಬೈಕ್ ರ್ಯಾಲಿ ನಡೆಯಿತು. ಅಲ್ಲಿ ಬಸವೇಶ್ವರ ಮೂರ್ತಿಗೆ ಮಾಲಾರ್ಪಣೆ ಮಾಡಿ ಜೈ ಘೋಷಣೆ ಮೊಳಗಿಸಿದರು.
ಈ ಸಂದರ್ಭದಲ್ಲಿ ಪ್ರಕಾಶ ಜೀರ್ಗೆ, ಬಸವರಾಜ ಚಿಕಲಿಂಗೆ, ರಾಜಕುಮಾರ್ ಲೆಂಡಧರೆ, ಮಹದೇವ ಕಲ್ಲಾ, ರವಿಕುಮಾರ ಸ್ವಾಮಿ, ಸೋಮನಾಥ ಮಠಪತಿ, ಭಾರತ ಸ್ವಾಮಿ, ಸಚಿನ್ ಸ್ವಾಮಿ, ಶ್ರೀಕಾಂತ, ಬಸಪ್ಪಾ ಗಡ್ರಾ, ನಾಗೇಶ್ ಸೇರಿದಂತೆ ಇತರರು ಉಪಸ್ಥಿತರಿದ್ದರು.