ಔರಾದ: ಬಸವಣ್ಣನವರ ವಚನ ಸಾಹಿತ್ಯ ಭಾರತ ಅಷ್ಟೇ ಅಲ್ಲದೆ, ಇಡೀ ವಿಶ್ವಕ್ಕೆ ಮಾದರಿಯಾಗಿದೆ ಎಂದು ಪೂಜ್ಯಶ್ರೀ ಗುರುಬಸವ ಪಟ್ಟದೇವರು ಹೇಳಿದರು.
ಸಂತಪುರ್ ಅನುಭವ ಮಂಟಪ ದಲ್ಲಿ ನಡೆದ ಶಿವಾನುಭವ ಗೋಷ್ಠಿ ಹಾಗೂ ಪೂಜ್ಯಶ್ರೀ ಸಿದ್ದೇಶ್ವರ ಮಹಾಸ್ವಾಮಿಗಳ ನುಡಿ ನಮನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. 12ನೇ ಶತಮಾನದ ಶರಣರು ಕಾಯಕಕ್ಕೆ ಬಹಳಷ್ಟು ಮಹತ್ವವನ್ನು ನೀಡಿ, ಕಾಯಕವೇ ಕೈಲಾಸ ಎಂದು ದುಡಿದವರು. ವಚನ ಸಾಹಿತ್ಯ ಮನಸ್ಸಿಗೆ ಶಾಂತಿ ಸಂದೇಶವನ್ನು ನೀಡುತ್ತವೆ. ಸಿದ್ದೇಶ್ವರ ಮಹಾಸ್ವಾಮಿಗಳು ಸರಳತೆ ಹಾಗೂ ಮಾದರಿ ಜೀವನಕ್ಕೆ ಪ್ರೇರಕರುಎಂದರು.
ಔರಾದ ತಾಲೂಕ ಘಟಕದ ಜಾನಪದ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಸಂಜೀವಕುಮಾರ ಜುಮ್ಮಾ ಮಾತನಾಡಿದರು. ಸಂತಪುರ ಅನುಭವ ಮಂಟಪ ಅಧ್ಯಕ್ಷರಾದ ಬಸವರಾಜ ಬಿರಾದರ, ಪ್ರಕಾಶ ದೇಶಮುಖ, ಪ್ರಸಾದ ದಾಸೋಹಿಗಳಾದ ಸುಜಾತಾ ಸಂಜುಕುಮಾರ ಹಾಗೂ ಗ್ರಾಮಸ್ಥರು, ಇತರರು ಉಪಸ್ಥಿತರಿದ್ದರು.