ಔರಾದ: ಬೀದರ್ ಉತ್ಸವ ಪ್ರಚಾರ ರಥಕ್ಕೆ ಔರಾದ ತಾಲ್ಲೂಕಿನ ವಡಗಾಂವ ದೇ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ cಹಸಿರು ನಿಶಾನೆ ತೋರಿ ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು, ಪ್ರಚಾರ ರಥವು ವಡಗಾಂವ ದೇ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸೋರಳ್ಳಿ ಹಾಗೂ ಖಾನಾಪುರ ಗ್ರಾಮಗಳಲ್ಲಿ ಬೀದರ್ ಉತ್ಸವದ ಪ್ರಚಾರ ಮಾಡಲಿದೆ. ಜಿಲ್ಲೆಯ ಕಲೆ, ಸಂಸ್ಕೃತಿ , ಪರಂಪರೆಯನ್ನುನಾಡಿಗೆ ಪರಿಚಯಿಸುವ ದಿಸೆಯಲ್ಲಿ ಜ. 7 ರಿಂದ 9 ರ ವರೆಗೆ ಬೀದರ್ ಉತ್ಸವ ಹಮ್ಮಿಕೊಳ್ಳಲಾಗಿದೆ. ಬೀದರ್ ಕೋಟೆಯಲ್ಲಿ ವೈವಿಧ್ಯಮಯ ಕಾರ್ಯಕ್ರಮಗಳು ನಡೆಯಲಿದ್ದು, ಸಾರ್ವಜನಿಕರು ಉತ್ಸವದ ಸವಿ ಅನುಭವಿಸಬೇಕು. ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಉತ್ಸವವನ್ನು ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಗ್ರಾ.ಪಂ. ಸದಸ್ಯ ರಾಜಕುಮಾರ ಹೇಡೆ, ರವಿ ಗಂಗಾ, ಗ್ರಾಮ ಲೆಕ್ಕಿಗ ನಾಮದೇವ್ ಮೇತ್ರೆ, ಸಂಜೀವ್ ಚೌಹಾಣ್, ವಿಜಯಕುಮಾರ, ಮನೋಹರ್ ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.