ಔರಾದ್: ಮಹಿಳೆಯರ ಸುರಕ್ಷತೆಗೆ ಹಾಗೂ ಸಾರ್ವಜನಿಕರಿಗೆ ಕ್ಷಣದಲ್ಲಿ ನೆರವು ನೀಡಲು ಸರಕಾರ ಇ.ಆರ್.ಎಸ್.ಎಸ್ ಜಾರಿ ಮಾಡಿದೆ ಎಂದು ಎಎಸ್‌ಐ ದಿಲೀಪ ದೇವಕತೆ ಹೇಳಿದರು.
ತಾಲೂಕಿನ ತೇಗಪೂರ ಗ್ರಾಮದಲ್ಲಿ ಜಿಲ್ಲಾ ಪೊಲೀಸ್ ಸಹಯೋ ಗದಲ್ಲಿ ಔರಾದ್ ಪೊಲೀಸ್ ಠಾಣೆ ಏರ್ಪಡಿ ಸಿದ್ದ ಜನಜಾಗೃತಿ ಕಾರ್ಯಕ್ರ ಮದಲ್ಲಿ ಮಾತನಾಡಿದರು. ಸಾರ್ವಜನಿಕರು ತುರ್ತು ಪರಿಸ್ಥಿತಿಯಲ್ಲಿ 112ಗೆ ಕರೆ ಮಾಡಿ, ಕೆಲವೇ ಕ್ಷಣದಲ್ಲಿ ಸ್ಪಂದನೆ ಸಿಗುತ್ತದೆ. ಅಗ್ನಿ, ವಿಪತ್ತು ಸೇರಿದಂತೆ ಯಾವುದೇ ಅಹಿತಕರ ಘಟನೆ ನಡೆದರೆ ಕೂಡಲೇ ಕರೆ ಮಾಡುವಂತೆ ಸೂಚಿಸಿದರು.
ಇಆರ್‌ಎಸ್‌ಎಸ್ ಸಿಬ್ಬಂದಿ ಮಹಾದೇವ ಬಿರಾದಾರ್ ಮಾತನಾಡಿ, ಈ ವಾಹನದಲ್ಲಿ ಬರುವ ಮೂಲಕ ಕುಡಲೇ ದೂರು ಪಡೆಯಲು ತಗಲುವ ಸಮಯ ಉಳಿತಾಯವಾಗಲಿದೆ. ವಿಳಂಬ ಎಂಬ ಆರೋಪವೂ ಕಡಿಮೆಯಾಗಲಿದೆ. ಇದೊಂದು ಮಹತ್ವಾಕಾಂಕ್ಷಿ ಯೋಜನೆಯಾಗಿದ್ದು, ಪೊಲೀಸರು ಜನಸಾಮಾನ್ಯರೊಂದಿಗೆ ಮತ್ತಷ್ಟು ಹತ್ತಿರವಾಗಲು ನೆರವಾಗಲಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮುಖ್ಯ ಪೇದೆ ಉತ್ತಮ ಬಿರಾದಾರ, ಸಿಬ್ಬಂದಿ ಮಾರುತಿ ರಡ್ಡಿ, ಗ್ರಾಮದ ಪ್ರಮುಖರಾದ ಬಸವಣ್ಣಪ್ಪ ಮೊಕೆದಾರ್, ಶಿವಾಜಿ ಜಾಧವ, ಶಿವಕಾಂತ ಮಜಿಗೆ, ಸಂಗಮೇಶ ಪಾಟೀಲ, ಚಂದ್ರಕಾಂತ ಮೊಕ್ತದಾರ, ಕಾಮಶೆಟ್ಟಿ ಚಿಟಮೇ, ಗುರುನಾಥ ಪಾಟೀಲ, ರಾಜಕುಮಾರ ಮೊಕೆದಾರ, ಝರೇಪ್ಪ ಸೇರಿದಂತೆ ಅನೇಕರಿದ್ದರು.