ಔರಾದ: ವೈದ್ಯರ ನಿರ್ಲಕ್ಷದಿಂದ ಮಗು ಸಾವು ಸಾವನಪ್ಪಿರುವುದರಿಂದ ಸೂಕ್ತ ಕ್ರಮಕ್ಕೆ ರತ್ನದೀಪ್ ಕಸ್ತೂರೆ ಆಗ್ರಹಿಸಿದ್ದಾರೆ.
ಸುಭಾಸ್ ಚಂದ್ರ ಭೋಸ್ ಯುವಕ ಸಂಘದ ವತಿಯಿಂದ ಮಾನ್ಯ ಮುಖ್ಯ ಮಂತ್ರಿಗಳಿಗೆ ಬರೆದ ಮನವಿ ಪತ್ರವನ್ನು ನಾಡ ತಹಸೀಲ್ದಾರ ಠಾಣಾ ಕುಶನೂರರವರಿಗೆ ಸಲ್ಲಿಸಿ, ಭಾರತ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟದ ಜಿಲ್ಲಾ ಉಪಾಧ್ಯಕ್ಷ ರತ್ನದೀಪ್ ಕಸ್ತೂರೆ ಮಾತನಾಡಿ, ಕಮಲನಗರ ತಾಲೂಕಿನ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಬೇಡಕುಂದಾ ಗ್ರಾಮದ ನಿವಾಸಿ ಸವಿತಾ ಡೆಲಿವರಿಗಾಗಿ ಆಸ್ಪತ್ರೆಗೆ ರವಿವಾರ ಮಧ್ಯಾಹ್ನ 1 ಗಂಟೆಗೆ ದಾಖಲು ಮಾಡಿರುತ್ತಾರೆ.
ರವಿವಾರದ ದಿವಸ ಆಸ್ಪತ್ರೆಯಲ್ಲಿ ಒಬ್ಬರು ವೈದ್ಯರು ಇರುವುದಿಲ್ಲ ಕೇವಲ ಒಬ್ಬ ನರ್ಸ್ ಇರುತ್ತಾರೆ. ಸವಿತಾರವರಿಗೆ ಆಸ್ಪತ್ರೆಗೆ ದಾಖಲಿಸಿಕೊಂಡು ಸುಮಾರು 6 ಗಂಟೆಗಳ ಕಾಲ ಇಲ್ಲೆ ಇಟ್ಟು ನಂತರ ಇಲ್ಲಿ ಡೆಲಿವರಿ ಆಗುವುದಿಲ್ಲಾ ಸಂತಪುರಗೆ ಕರೆದುಕೊಂಡು ಹೋಗಿ ಎನುತ್ತಾರೆ. ಸಂತಪುರ ಆಸ್ಪತ್ರೆಯವರು ಬೀದರ್‌ಗೆ ಕರೆದುಕೊಂಡು ಹೋಗಿ ಎಂದು ಹೇಳುತ್ತಾರೆ ವೈದ್ಯರ ನಿರ್ಲಕ್ಷದಿಂದ ಮಾರ್ಗ ಮಧ್ಯ ಸವಿತಾ ಡೆಲಿವರಿಯಾಗಿ ಮಗು ಸಾವನ್ನಪ್ಪಿದೆ. ಈ ಮಗು ಸಾವಿಗೆ ಕಾರಣ ಕರ್ತರಾದ ಕುಶನೂರ್ ಆಸ್ಪತ್ರೆಯ ವೈದ್ಯರ ಗೈರು ಮತ್ತು ಅಲ್ಲಿನ ಸಿಬ್ಬಂದಿಗಳ ನಿರ್ಲಕ್ಷ. ಆದ್ದರಿಂದ ಸಂಬಂಧ ಪಟ್ಟ ವೈದ್ಯರಿಗೆ ಸೇವೆಯಿಂದ ಅಮಾನತ್ತು ಮಾಡಬೇಕು. ಇಲ್ಲವಾದಲ್ಲಿ ಮುಂಬರುವ ದಿನಗಳಲ್ಲಿ ಉಗ್ರವಾದ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು. ಈ ಸಂದರ್ಭದಲ್ಲಿ ಪ್ರಮುಖರಾದ ರಾಹುಲ್ ಜಾಧವ, ಚಂದು ಹೆಗಡೆ, ಆಕಾಶ್ ಹಾಗೂ ಬೇಡಕುಂದ ಗ್ರಾಮಸ್ಥರು ಉಪಸ್ಥಿತರಿದ್ದರು.