ಔರಾದ: ಜಲ ಜೀವನ ಮಿಷನ್ ಯೋಜನೆಯಡಿ ಔರಾದ(ಬಿ) ಹಾಗೂ ಕಮಲನಗರ ತಾಲ್ಲೂಕುಗಳಲ್ಲಿ ಸುಮಾರು 200 ಕೋಟಿಗಿಂತ ಹೆಚ್ಚು ಮೊತ್ತದಲ್ಲಿ ಕುಡಿಯುವ ನೀರಿನ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಪ್ರತಿ ಮನೆಗೂ ನೀರಿನ ಸಂಪರ್ಕ ಕಲ್ಪಿಸಬೇಕೆಂದು ಪಶು ಸಂಗೋಪನೆ ಸಚಿವರಾದ ಪ್ರಭು .ಬಿ ಚವ್ಹಾಣ ಅವರು ಅಧಿಕಾರಿಗಳಿಗೆ ಸೂಚಿಸಿದರು.
ಇಂದು ಔರಾದ(ಬಿ) ಹಾಗೂ ಕಮಲನಗರ ತಾಲ್ಲೂಕಿನ 21ಕ್ಕೂ ಹೆಚ್ಚು ಗ್ರಾಮಗಳಲ್ಲಿ ಪ್ರವಾಸ ಕೈಗೊಂಡು ಕೈಗೊಂಡು ಸುಮಾರು 7 ಕೋಟಿಯ ಅಭಿವೃದ್ಧಿ ಕೆಲಸಗಳಿಗೆ ಶಂಕುಸ್ಥಾಪನೆ ನೆರವೇರಿಸಿ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಎಲ್ಲ ಕಾಮಗಾರಿಗಳು ನಿಗಧಿತ ಅವಧಿಯೊಳಗಾಗಿ ಪೂರ್ಣಗೊಳ್ಳಬೇಕು. ಔರಾದ(ಬಿ) ಕ್ಷೇತ್ರದಲ್ಲಿರುವ ನೀರಿನ ಸಮಸ್ಯೆಯನ್ನು ಶಾಶ್ವತವಾಗಿ ಪರಿಹರಿಸುವ ಉದ್ಧೇಶದಿಂದ ಸಾಕಷ್ಟು ಮುತುವರ್ಜಿ ವಹಿಸಿ ಅನುದಾನ ತಂದಿದ್ದೇನೆ. ಅತ್ಯಂತ ಮಹತ್ವದ್ದಾರುವ ಈ ಯೋಜನೆ ಗುಣಮಟ್ಟದಿಂದ ಆಗಬೇಕು. ಸ್ಥಳೀಯ ಅಧಿಕಾರಿಗಳು ಮೇಲಿಂದ ಮೇಲೆ ಪರಿಶೀಲಿಸಿ ಕೆಲಸ ಸರಿಯಾಗಿ ಆಗುವಂತೆ ನೋಡಿಕೊಳ್ಳಬೇಕು. ಈ ವಿಷಯದಲ್ಲಿ ನಿರ್ಲಕ್ಷ್ಯ ವಹಿಸಿದರೆ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದರು.
ಕೊಳ್ಳೂರನಲ್ಲಿ 132.16 ಲಕ್ಷ, ಗುಡಪಳ್ಳಿ ತಾಂಡಾದಲ್ಲಿ 24 ಲಕ್ಷ, ಖೀರಾ ತಾಂಡಾದಲ್ಲಿ 24.10 ಲಕ್ಷ, ವಾಡೆನಬಾಗ್ ತಾಂಡಾದಲ್ಲಿ 25 ಲಕ್ಷ, ಆಲೂರ(ಬಿ)ನಲ್ಲಿ 44.93 ಲಕ್ಷ, ಮಾಣಿಕ ತಾಂಡಾದಲ್ಲಿ 43.44 ಲಕ್ಷ, ಮಹಾರಾಜ ತಾಂಡಾದಲ್ಲಿ 26.98 ಲಕ್ಷ, ಮಹಾರಾಜ ವಾಡಿ ತಾಂಡಾದಲ್ಲಿ 34.98 ಲಕ್ಷ, ಖೇಮಾ ತಾಂಡಾದಲ್ಲಿ 20.14 ಲಕ್ಷ, ಗಂಗಾರಾಮ ತಾಂಡಾದಲ್ಲಿ 43 ಲಕ್ಷ, ಖಾಶೆಂಪೂರ(ಬಿ)ನಲ್ಲಿ 36 ಲಕ್ಷ, ಹೆಡಗಾಪೂರ ತಾಂಡಾಸಲ್ಲಿ 35 ಲಕ್ಷ, ಕಿಶನ್ ನಾಯಕ್ ತಾಂಡಾದಲ್ಲಿ 24.5 ಲಕ್ಷ, ಭೋಜಾ ತಾಂಡಾದಲ್ಲಿ 23.09 ಲಕ್ಷ ವೆಚ್ಚದಲ್ಲಿ ಕೈಗೊಂಡಿರುವ ಜಲ ಜೀವನ ಮಿಷನ್ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದರು.
ಹಾಗೆಯೇ ವಡಗಾಂವನಲ್ಲಿ 15 ಲಕ್ಷ, ಸೋರಳ್ಳಿಯಲ್ಲಿ 15 ಲಕ್ಷ ಹಾಗೂ ರಕ್ಷ್ಯಾಳ (ಕೆ)ನಲ್ಲಿ 15 ಲಕ್ಷ ಮೊತ್ತದ ಅಂಗನವಾಡಿ ಕಟ್ಟಡಗಳು, ಬನ್ಸಿ ತಾಂಡಾದಲ್ಲಿ 9.5 ಲಕ್ಷ, ವಿಠಲ ತಾಂಡಾ 13 ಲಕ್ಷದ ಸಮುದಾಯ ಭವನ ಕಟ್ಟಡಗಳು, ಸೋರಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 27.8 ಲಕ್ಷದ ಹೆಚ್ಚುವರಿ ತರಗತಿ ಕೋಣೆಗಳು, ಬೆಳಕುಣಿ ಚೌದ್ರಿಯಲ್ಲಿ ಎರಡು ಹೆಚ್ಚುವರಿ ತರಗತಿ ಕೋಣೆಗಳಿಗೆ ಭೂಮಿ ಪೂಜೆ, ಆಲೂರ(ಕೆ) ಗ್ರಾಮದಲ್ಲಿ 17 ಲಕ್ಷದ ನೀರಿನ ಟ್ಯಾಂಕ್ ನಿರ್ಮಾಣ ಕಾಮಗಾರಿಗೆ ಸಚಿವರು ಗುದ್ದಲಿ ಪೂಜೆ ನೆರವೇರಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ಸುರೇಶ ಭೋಸ್ಲೆ, ರಾಮಶೆಟ್ಟಿ ಪನ್ನಾಳೆ, ಗಿರೀಶ್ ಒಡೆಯರ್, ಶಿವರಾಜ ಅಲ್ಮಾಜೆ, ಶ್ರೀನಿವಾಸ ಖೂಬಾ, ಪ್ರದೀಪ ಪವಾರ್, ಸುಜಿತ್ ರಾಠೋಡ್, ನಾಗಶೆಟ್ಟಿ ಗಾದಗೆ, ಸುರಾ ನಾಯಕ್, ಮಾದಪ್ಪ ಮಿಠಾರೆ, ಬಾಲಾಜಿ ಠಾಕೂರ, ಶರಣಪ್ಪ ಪಂಚಾಕ್ಷರಿ, ಶಿವಾಂಜೆ ಬಿರಾದಾರ, ಬಾಪುರಾವ ರಾಠೋಡ್, ಖಂಡೋಬಾ ಕಂಗಟೆ, ಪ್ರಕಾಶ ಮೇತ್ರೆ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಮುಖಂಡರು ಉಪಸ್ಥಿತರಿದ್ದರು.