ಔರಾದ: ಔರಾದ ಬಸ್ ಡಿಪೋ ವಸತಿ ಗೃಹ ಕಾಮಗಾರಿ ಪ್ರಾರಂಭಿಸುವಲ್ಲಿ ನಿರ್ಲಕ್ಷ ತೋರಿದ ಕಾರಣ ಕಲ್ಯಾಣ ಕರ್ನಾಟಕ ಸಾರಿಗೆ ರಸ್ತೆ ಸಾರಿಗೆ ನಿಗಮದ ವ್ಯವಸ್ಥಾಪಕ ನಿರ್ದೇಶಕ ಎಮ್. ರಾಚಪ್ಪ ಇವರ ವಿರುದ್ದ ಸಾಮಾಜ ಸೇವಕ ಗುರುನಾಥ ವಡ್ದೆ ಫೆ. 24ರಂದು ಕರ್ನಾಟಕ ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ್ದಾರೆ.
ಔರಾದ ತಾಲೂಕಾ ಕೇಂದ್ರದಲ್ಲಿ ಇದ್ದ ಬಸ್ ಡಿಪ್ಪೊ ನೌಕರರಿಗಾಗಿ ವಸತಿ ಗೃಹಗಳ ನಿರ್ಮಾಣಕ್ಕಾಗಿ ನಿಗಮದಿಂದ ದಿನಾಂಕ 31-01-2020ರಂದು ರೂ.24067807 ಅನುದಾನ ನೀಡಿ, ಕಾಮಗಾರಿ ಪ್ರಾರಂಭಿಸಲು ಆದೇಶ ನೀಡಿರುತ್ತದೆ. ಆದರೆ ಇನ್ನೂವರೆಗೆ ಔರಾದನಲ್ಲಿ ಬಸ್ ಡಿಪೋ ವಸತಿ ಗೃಹಗಳ ಕಾಮಗಾರಿ ಪ್ರಾರಂಭ ವಾಗಿರುವುದಿಲ್ಲ. ಇದು ನಿಗಮದ ಕರ್ತವ್ಯ ನಿರ್ಲಕ್ಷತೆಯಾಗಿರುತ್ತದೆ. ಆದ್ದರಿಂದ ತಕ್ಷಣ ವಸತಿ ಗೃಹಗಳ ಕಾಮಗಾರಿಗಳು ಪ್ರಾರಂಭಿಸಬೇಕು ಹಾಗೂ ಇದಕ್ಕೆ ವಿಳಂಬ ಮಾಡಿದ ನಿಗಮದ ವ್ಯವಸ್ಥಾಪಕ ಕರ್ತವ್ಯ ನಿರ್ಲಕ್ಷತೆ ಬಗ್ಗೆ ತನಿಖೆ ನಡೆಸಬೇಕೆಂದು ಕೋರಿ ಸಮಾಜ ಸೇವಕ ಗುರುನಾಥ ವಡ್ಡೆಯವರು ಕರ್ನಾಟಕ ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ್ದಾರೆ.