ಔರಾದ: ಬೀದರ್‌ನಿಂದ ಔರಾದಗೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಸಂಪೂರ್ಣ ಕಳಪೆ ಗುಣಮಟ್ಟದಿಂದ ನಿರ್ಮಿಸಲಾಗುತ್ತಿದೆ ಎಂದು ಸುಭಾಷ್ ಚಂದ್ರಭೋಸ್ ಯುವಕ ಸಂಘ ಆರೋಪಿಸಿದೆ.
ಯುವಕ ಸಂಘದ ಅಧ್ಯಕ್ಷ ರತ್ನದೀಪ್ ಕಸ್ತೂರೆ ಹಾಗೂ ಇತರ ಯುವಕರು ಈ ಸಂಬಂಧ ಕಲಬುರಗಿಯ ರಾಷ್ಟ್ರೀಯ ಹೆದ್ದಾರಿಯ ಪ್ರಧಿಕಾರದ ಯೋಜನಾ ನಿರ್ದೇಶಕರಿಗೆ ದೂರು ನೀಡಿದ್ದಾರೆ.
ಈ ವೇಳೆ ರತ್ನದೀಪ ಕಸ್ತೂರೆ ಮಾತನಾಡಿ, ರಸ್ತೆ ಮಾರ್ಗ ಮಧ್ಯ ಬರುವ ಸೇತುವೆಗಳಿಗೆ ಕಳಪೆ ಮಟ್ಟದ ಡಸ್ಟ್ ಬಳಸಲಾಗುತ್ತಿದೆ ಈ ಬಗ್ಗೆ ಸಚಿವ ಪ್ರಭು ಚೌಹಾಣ್ ಕೂಡ ಭೇಟಿ ನೀಡಿದರು, ಯಾವುದೇ ಪ್ರಯೋಜನವಾಗಿಲ್ಲ ಸಂಬಂಧಿಸಿದ ಅಧಿಕಾರಿಗಳ ಹಾಗೂ ಗುತ್ತಿಗೆದಾರರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಹನಮಂತ ದೇಶಮುಖ್, ರಾಹುಲ್ ಜಾಧವ ಉಪಸ್ಥಿತರಿದ್ದರು.