ಔರಾದ: ಮತದಾನ ಎಂಬುದು ದೇಶದ ಪ್ರತಿಯೊಬ್ಬ ನಾಗರಿಕರ ಕರ್ತವ್ಯ ಹಾಗೂ ಮೂಲ ಹಕ್ಕಾಗಿದ್ದು, ಯಾವುದೇ ಆಸೆ ಆಮಿಷಕ್ಕೆ ಒಳಗಾಗದೆ ಪ್ರತಿಯೊಬ್ಬರು ಕಡ್ಡಾಯವಾಗಿ ಮತದಾನ ಮಾಡಬೇಕು ಎಂದು ಏಕತಾ ಫೌಂಡೇಶನ್ ಸಂಸ್ಥಾಪಕ ರವೀಂದ್ರ ಸ್ವಾಮಿ ಹೇಳಿದರು.
ತಾಲೂಕಿನ ತಮ್ಮಸ್ವ ಗ್ರಾಮ ಹಾಲಳ್ಳಿ ಗ್ರಾಮದ ಬೂತ್ ಸಂಖ್ಯೆ 200ರಲ್ಲಿ ಮತದಾನ ಮಾಡಿ ಮಾತನಾಡಿದ ಅವರು, ಪ್ರತಿಯೊಬ್ಬರು ಕಡ್ಡಾಯವಾಗಿ ಮತದಾನ ಮಾಡಿ ಭ್ರಷ್ಟಾಚಾರ ಮುಕ್ತ ಹಾಗೂ ಔರಾದ ಅಭಿವೃದ್ಧಿಗಾಗಿ ನೀವೂ, ನಿಮ್ಮ ಕುಟುಂಬ ವರ್ಗದವರು ಸೇರಿದಂತೆ ಸುತ್ತಮುತ್ತಲಿನ ಸ್ನೇಹಿತರು, ಬಂಧು-ಮಿತ್ರರಿಗೆಲ್ಲಾ ಮತದಾನ ಮಾಡುವಂತೆ ಉತ್ತೇಜಿಸಬೇಕು ಎಂದು ಸಲಹೆ ನೀಡಿದರು.