ಔರಾದ: ಭಾಲ್ಕಿ ಹಿರೇಮಠ ಸಂಸ್ಥಾನದ ಶಾಖಾಮಠ ಶ್ರೀ ಗುರು ಪತ್ರಿಸ್ವಾಮಿ ಮಠ ಸಂಸ್ಥಾನ ಜೊನ್ನೆಕೇರಿಯಲ್ಲಿ ಅನುಭವ ಮಂಟಪ ಸಂಸ್ಕೃತಿ-ಸಂಸ್ಕಾರ ಶಿಬಿರದ ಕರಪತ್ರವನ್ನು ಬಿಡುಗಡೆಗೊಳಿಸಲಾಯಿತು.
ಇದೇ ತಿಂಗಳ ಮೇ 19ರಿಂದ 28ರವರೆಗೆ ಹತ್ತು ದಿನಗಳ ಶಿಬಿರ ಈ ಶಿಬಿರ ಇಂದಿನ ಮಕ್ಕಳಲ್ಲಿ ಮಾನವೀಯ ಮೌಲ್ಯಗಳು, ಧಾರ್ಮಿಕ ಸಂಸ್ಕಾರ, ಶರಣರ ಸಂಸ್ಕೃತಿ ಬಿತ್ತುವ ಮೂಲಕ ಚಾರಿತ್ರ್ಯ ಸಂಪತ್ತನಾಗಿ ಮಕ್ಕಳನ್ನು ಮಾಡಲಾಗುವ ಉದ್ದೇಶ ಹೊಂದಿದೆ. ಶಿಬಿರ 6ನೇ ತರಗತಿಯಿಂದ 10ನೇ ತರಗತಿವರೆಗಿನ ವಿದ್ಯಾರ್ಥಿಗಳು ಪ್ರವೇಶ ನೊಂದಣಿ ಮಾಡಿಕೊಳ್ಳಬಹುದು ವಸತಿ ಸಹಿತವಾಗಿರುತ್ತದೆ. ಈ ಶಿಬಿರ ದಿವ್ಯ ಸಾನಿಧ್ಯ ಬಸವಕಲ್ಯಾಣ ಅನುಭವ ಮಂಟಪ ಅಧ್ಯಕ್ಷ ಡಾ. ಬಸವಲಿಂಗ ಪಟ್ಟದೇವರು, ನೇತೃತ್ವ ಭಾಲ್ಕಿ ಹಿರೇಮಠ ಸಂಸ್ಥಾನದ ಗುರುಬಸವ ಪಟ್ಟದೇವರು ವಹಿಸಲಿದ್ದಾರೆ. ಅಲ್ಲದೆ ಮಹಾಲಿಂಗದೇವರ ಮಾರ್ಗದರ್ಶನದಲ್ಲಿ ಶಿಬಿರ ಜರುಗಲಿದೆ ಎಂದು ಶಿಬಿರದ ಸಂಯೋಜಕ ಸಂಜುಕುಮಾರ ಜುಮ್ಮಾ ಹೇಳಿದರು.
ಗ್ರಾಮದ ಮುಖಂಡರಾದ ಪ್ರಭುರಾವ್ ಪಾಟೀಲ, ಸತೀಶ ಬಿರಾದರ್, ರಾಜಕುಮಾರ ಸದಾನಂದ, ಪ್ರಾಂಶುಪಾಲ ನವೀಲಕುಮಾರ ಉತ್ಕಾ, ಪ್ರಶಾಂತ ಸದಾನಂದ, ಸಂಗಮೇಶ್ ಪಾಟೀಲ್, ಬಂಡಯ್ಯ ಸ್ವಾಮಿ ಇತರರು ಉಪಸ್ಥಿತರಿದ್ದರು. ಹೆಚ್ಚಿನ ಮಾಹಿತಿಗಾಗಿ 9535176033, 9141602990 ನಂಬರಿಗೆ ಸಂಪರ್ಕಿಸಬಹುದು ಎಂದು ಕೋರಿದರು.