News Karnataka
ಸಿಟಿಜನ್ ಕಾರ್ನರ್

ಆರೋಗ್ಯ ರಕ್ಷಣೆಯಲ್ಲಿ ವೈದ್ಯರ ಪಾತ್ರ ಹಿರಿದು

Doctors have a big role to play in health care: Rathikanta Swamy
Photo Credit : Ravi Mathapati

ಔರಾದ: ಆರೋಗ್ಯ ರಕ್ಷಣೆಯಲ್ಲಿ ವೈದ್ಯರ ಪಾತ್ರ ಹಿರಿದು ಎಂದು ಬೀದರ್ ಜಿಲ್ಲಾ ಆರೋಗ್ಯ ಅಧಿಕಾರಿ ರತಿಕಾಂತ ಸ್ವಾಮಿ ಹೇಳಿದರು. ತಾಲೂಕಿನ ಸಂತಪೂರ ಸಿದ್ಧರಾಮೇಶ್ವರ ಪದವಿಪೂರ್ವ ಕಾಲೇಜಿನಲ್ಲಿ ಕಾಲೇಜು ಹಾಗೂ ತುಕಾರಾಮ ಹಸನ್ಮುಖಿ ಗೆಳೆಯರ ಬಳಗ ವತಿಯಿಂದ ವೈದ್ಯ ವಿಭೂಷಣ ಪ್ರಶಸ್ತಿ ಪುರಸ್ಕೃತ ವೈದ್ಯರಿಗೆ ಅಭಿನಂದನಾ ಸಮಾರಂಭ ಕಾರ್ಯಕ್ರಮದಲ್ಲಿ ಮಾತನಾಡಿದರು.

2006ರಲ್ಲಿ ಚಿಕನ್ ಗುನ್ಯಾ ದಕ್ಷಿಣ ಭಾರತ ಕೇರಳದಲ್ಲಿ ಪತ್ತೆ ಹಚ್ಚುವ ಮೂಲಕ ಪರಿಹರಿಸುವುದರಲ್ಲಿ ನಮ್ಮ ವೈದ್ಯ ತಂಡ ಪ್ರಮುಖ ಪಾತ್ರ ವಹಿಸಿದರು ಹಾಗೂ ಕೋವಿಡ್ ಸಮಯದಲ್ಲಿ ಅದ್ಭುತ ಸೇವೆಗೈದು ಸಮಾಜಕ್ಕೆ ತಮ್ಮದೇ ಆದ ಕೊಡುಗೆಯನ್ನು ನೀಡುತ್ತಿದ್ದಾರೆ.

ಜಿಲ್ಲಾ ಶಸ್ತ್ರಚಿಕಿತ್ಸಾಧಿಕಾರಿ ಡಾ. ಮಹೇಶ ಬಿರಾದರ ಮಾತನಾಡಿ, ಆಹಾರ ಪದ್ಧತಿಗಳಾದ ಹಣ್ಣುತರಕಾರಿ, ಪೌಷ್ಟಿಕ ಆಹಾರ ಸೇವನೆಯಿಂದ ಜೀವಿತಾವಧಿ ಹೆಚ್ಚಿಸಿಕೊಳ್ಳಬಹುದು ಎಂದು ಹೇಳಿದರು.

ಸಂತಪು‌ ಪಂಚಾಯತ್‌ ಅಭಿವೃದ್ಧಿ ಅಧಿಕಾರಿ ಸಂತೋಷ ಪಾಟೀಲ ಮಾತನಾಡಿದರು. ಡಾ. ಕಿರಣ ಪಾಟೀಲ, ಪ್ರಾಂಶುಪಾಲ ನವೀಲಕುಮಾರ ಉತ್ಕಾರ, ತುಕಾರಾಮ್ ಹಸನ್ಮುಖಿ, ಗಣಪತಿ ವಾಸುದೇವ, ಕಾಲೇಜಿನ ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ವೈದ್ಯ ವಿಭೂಷಣ ಪ್ರಶಸ್ತಿ ಪುರಸ್ಕೃತರಾದ ಡಾ. ರತಿಕಾಂತ ಸ್ವಾಮಿ ಹಾಗೂ ಡಾ. ಮಹೇಶ ಬಿರಾದರ ಅವರನ್ನು ಸನ್ಮಾನಿಸಲಾಯಿತು.

Ravi Mathapati

Read More Articles
MANY DROPS MAKE AN OCEAN
Support NewsKarnataka's quality independent journalism with a small contribution.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *