ಬೋಂತಿ ಗ್ರಾಮ ವ್ಯಾಪ್ತಿಯ ಸಾವರಗಾಂವ ಗ್ರಾಮದಲ್ಲಿ ಕೈಗೊಳ್ಳಲಾಗಿರುವ ಉದ್ಯೋಗ ಖಾತ್ರಿ ಯೋಜನೆ ಕಾಮಗಾರಿಗಳು ಸಂಪೂರ್ಣವಾಗಿ ಬೋಗಸ್ ಆಗಿದ್ದು, ಸರ್ಕಾರದ ಎಲ್ಲಾ ಯೋಜನೆಗಳು ದುರ್ಬಳಕೆ ಆಗಿವೆ ಎಂದು ಕಾಂಗ್ರೆಸ್ ಮುಖಂಡ ಸುಧಾಕರ ಕೊಳ್ಳುರ ಮತ್ತಿತರು ಆರೋಪಿಸಿದ್ದಾರೆ.
ಈ ಕುರಿತು ತಹಶೀಲ್ದಾರ್ ಮತ್ತು ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿಗೆ ಮನವಿ ಸಲ್ಲಿಸಿದರು. ನಂತರ ಸುಧಾಕರ್ ಕೊಳ್ಳುರ ಮಾತನಾಡಿ, ಈ ಗ್ರಾಮ ಸಚಿವ ಪ್ರಭು ಚೌಹಾಣ್ ಅವರ ತವರು ಗ್ರಾಮ ಆಗಿದ್ದು ಇಲ್ಲಿಯೇ ಇಷ್ಟು ಭ್ರಷ್ಟಾಚಾರ ಮತ್ತು ದುರಾಡಳಿತ ನಡೆಯುತ್ತಿದ್ದಾರೆ ಬೇರೆ ಗ್ರಾಮಗಳ ಗತಿಯೇನು? ಸರ್ಕಾರದ ಯೋಜನೆಗಳು ದುರ್ಬಳಿಕೆ ಮಾಡಿಕೊಳ್ಳಲಾಗುತ್ತಿದೆ ಈ ಕುರಿತು ಸೂಕ್ತ ತನಿಖೆ ನಡೆಸುವಂತೆ ಒತ್ತಾಯಿಸಿದರು.
ಇದೇ ತಿಂಗಳ 10ರ ಒಳಗಾಗಿ ಕಾಮಗಾರಿಗಳ ತನಿಖೆ ಮಾಡಿ ಯಾರೇ ತಪ್ಪಿತಸ್ಥರಿದ್ದರು ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಇಲ್ಲವಾದರೆ ಸಾವರಗಾಂವ ಗ್ರಾಮದಿಂದ ಔರದವರಗೆ ಪಾದಯಾತ್ರೆ ನಡೆಸಿ ಪ್ರತಿಭಟನೆ ಮಾಡಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ದಲಿತ ಸಂಘರ್ಷ ಸಮಿತಿ ತಾಲೂಕ ಅಧ್ಯಕ್ಷ ಸುಭಾಸ್ ಲಾಧಾ, ಚಿನ್ನುಮಿಯಾ ಶೇಂಬೆಳ್ಳಿ, ಮಾರುತಿ ಲಿಂಗೆ, ಬಾಲಾಜಿ, ಸತೀಶ, ರಾಮ, ತುಕಾರಾಮ ಸೂರ್ಯಕಾಂತ್ ಕಾಂಬಳೆ ಸೇರಿದಂತೆ ಇತರರು ಉಪಸ್ಥಿತರಿದ್ದರು.