ಔರಾದ: ಗ್ರಾಮೀಣ ಭಾಗದಲ್ಲಿನ ಪ್ರತಿಯೊಬ್ಬರಿಗೂ ಉತ್ತಮ ವೈದ್ಯಕೀಯ ಸೇವೆ ಸಿಗಬೇಕು ಎನ್ನುವ ಉದ್ದೇಶದಿಂದ ಸರ್ಕಾರ ಗ್ರಾಮ ಪಂಚಾಯತ ಆರೋಗ್ಯ ಅಮೃತ ಅಭಿಯಾನ ಯೋಜನೆಯ ಮೂಲಕ ಉತ್ತಮ ಚಿಕಿತ್ಸೆ ನೀಡುತ್ತಿದೆ ಎಂದು ಕೆಎಚ್‌ಪಿಟಿ ತಾಲೂಕು ಸಂಯೋಜಕ ಅಮರನಾಥ ಮುಕ್ತೇದಾರ ತಿಳಿಸಿದರು.
ತಾಲೂಕಿನ ಸೋರಳ್ಳಿ ಗ್ರಾಮದಲ್ಲಿ ನಡೆದ ಪ್ರಾಥಮೀಕ ಆರೋಗ್ಯ ಕೇಂದ್ರ ವಡಗಾಂವ ಹಾಗೂ ಕೆ,ಎಚ್,ಪಿ,ಟಿ ಗ್ರಾಮ ಪಂಚಾಯತ ಆರೋಗ್ಯ ಅಮೃತ ಅಭಿಯಾನ ಕಾರ್ಯಕ್ರಮ್ಕಕೆ ಚಾಲನೆ ನೀಡಿ ಮಾತನಾಡಿದ ಅವರು ಗ್ರಾಮೀಣ ಭಾಗದಲ್ಲಿರುವ ಬಡ ಕೂಲಿ ಕಾರ್ಮಿಕರಿಗೆ ಹಾಗೂ ಹಿಂದೂಳಿದ ಕುಟುಂಬದ ಸದಸ್ಯರಿಗೆ ಸರ್ಕಾರದಿಂದ ಒಳ್ಳೆಯ ಚಿಕಿತ್ಸೆ ಸಿಗಬೇಕು ಎನ್ನುವ ಉದೇಶದಿಂದ ಸರ್ಕಾರ ತಾಲೂಕಿನಲ್ಲಿ ಈ ಯೋಜನೆಯ ಮೂಲಕ ಸಾರ್ವಜನಿಕರಿಗೆ ಉತ್ತಮ ಚಿಕಿತ್ಸೆ ನೀಡುತ್ತಿದೆ. ಹಿಗಾಗಿಯೇ ತಾಲೂಕಿನ ಸೋರಳ್ಳಿ ಗ್ರಾಮದಲ್ಲಿ ೧೦೦ಕ್ಕೂ ಹೆಚ್ಚು ಜನರು ಬಂದು ಚಿಕಿತ್ಸೆ ಪಡೆದುಕೊಂಡು ಹೋಗುತ್ತಿದ್ದಾರೆಂದರು. ಉಚಿತ ಆರೋಗ್ಯ ತಪಾಸಣಾ ಶಿಬಿರ ಉದ್ದೇಶಿಸಿ ಮಾತನಾಡಿದ ಗ್ರಾಪಂ ಸದಸ್ಯ ರಾಜಕುಮಾರ ಬಿರಾದಾರ, ಬಡವರು ಹಾಗೂ ಗ್ರಾಮೀಣ ಪ್ರದೇಶದವರು ಮತ್ತು ಮಧ್ಯಮ ವರ್ಗದವರಿಗೆ ಉತ್ತಮ ಹಾಗೂ ಉಚಿತ ಆರೋಗ್ಯ ಸೇವೆ ಕಲ್ಪಿಸುವ ನಿಟ್ಟಿನಲ್ಲಿ ಸರ್ಕಾರ ಸಂಘ ಸಂಸ್ಥೆಗಳ ಮೂಲಕ ನಮ್ಮೂರಿನಲ್ಲಿನ ಜನರಿಗೆ ಉತ್ತಮ ಚಿಕಿತ್ಸೆ ನೀಡುತ್ತಿದೆ.
ಈ ಹಿಂದೆ ಸಂಸ್ಥೆಯಿಂದ ೬೦ಕ್ಕೂ ಹೆಚ್ಚು ಜನರು ಆರೋಗ್ಯ ತಪಾಷಣೆ ಮಾಡಿಕೊಂಡರು ಆದರೆ ಇಂದು ನಡೆದ ತಪಾಸಣಾ ಕಾರ್ಯಕ್ರಮದಲ್ಲಿ ೧೦೦ಕ್ಕೂ ಹೆಚ್ಚು ಜನರು ತಪಾಷಣೆ ಮಾಡಿಕೊಂಡಿರುವುದು ನಿಜಕ್ಕೂ ಹೆಮ್ಮೆಯ ಸಂಗತಿಯಾಗಿದೆ ಎಂದರು, ತಾಲೂಕು ಕೇಂದ್ರ ಸ್ಥಾನದಿಂದ ೩೫ಕಿಮಿ ದೂರದಲ್ಲಿರುವ ನಮ್ಮ ಗ್ರಾಮದವರು ಆರೋಗ್ಯ ತಪಾಸಣಾ ಮಾಡಿಕೊಳ್ಳಲು ಒಂದು ದಿನ ಸಮಯ ಬೇಕಾಗಿತ್ತು ಅಲ್ಲದೆ ವಡಗಾಂವ ಆರೋಗ್ಯ ಕೇಂದ್ರಕ್ಕೆ ಹೋಗಿ ಬರಲು ಸಮಯದ ಜೋತೆಗೆ ಹಣವು ವ್ಯರ್ಥವಾಗುತ್ತಿತ್ತು ಇಂದು ಸರ್ಕಾರ ನಮ್ಮೂರಿಗೆ ಬಂದು ಹಿರಿಯರಿಗೆ ಕಿರಿಯರಿಗೆ ಆರೋಗ್ಯ ತಪಾಷಣೆ ಮಾಡಿಸುತ್ತಿರುವುದು ಸಂತಸದ ವಿಷಯವಾಗಿದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಸಿಎಚ್ ಓ ಪ್ರತಿಭಾ, ಗ್ರಾಪಂ ಸದಸ್ಯ ಭರತ, ಸಾವಿತ್ರಿಬಾಯಿ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.