ಔರಾದ: ಬೀದರ್ ಉತ್ಸವಕ್ಕಿಂತ ಮೊದಲು ಕೌಠಾ ಸೇತುವೆ ದುರಸ್ತಿ ಮಾಡಿ, ಸೇತುವೆಯ ಮೇಲಿಂದ ಸಂಚಾರ ಪ್ರಾರಂಭಿಸಬೇಕೆಂದು ಸಮಾಜ ಸೇವಕ ಗುರುನಾಥ್ ವಡ್ಡೆಯವರು ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದ್ದಾರೆ.
ಕೌಠ ಸೇತುವೆಯ ಕೆಲ ಭಾಗ ಕುಸಿದು ಸಂಚಾರ ಸ್ಥಗಿತಗೊಂಡಿರುವುದರಿಂದ ಔರಾದ ತಾಲೂಕಿನ ಜನರಿಗೆ ವಿಶೇಷವಾಗಿ ವಿದ್ಯಾರ್ಥಿಗಳಿಗೆ ಬೀದರ್ ಬರಲು ಬಹಳ ಕಷ್ಟವಾಗುತ್ತಿದೆ. ಬೀದರ್ ಉತ್ಸವ ನಿಮಿತ್ಯ ಬೀದರ್ ನಗರದಲ್ಲಿ ಸರಿಯಾಗಿದ್ದ ರಸ್ತೆಯ ಮೇಲೆ ಮತ್ತೆ ರಸ್ತೆ ನಿರ್ಮಾಣ ಮಾಡಲಾಗುತ್ತಿದೆ. ಇದು ಕೇವಲ ಹಣ ಖರ್ಚು ಮಾಡುವ ದೃಷ್ಟಿಯಿಂದ ರಸ್ತೆ ನಿರ್ಮಾಣ ಮಾಡಲಾಗುತ್ತಿದೆ. ಆದರೆ ಕೌಠಾ ಸೇತುವೆಯ ಕೆಲ ಭಾಗ ಕುಸಿತದಿಂದ ಸಂಚಾರ ಸ್ಥಗಿತಗೊಂಡಿದ್ದು, ಔರಾದ ತಾಲೂಕಿನ ಜನರಿಗೆ ಬಹಳ ತೊಂದರೆಯಾಗುತ್ತಿದೆ. ಈ ತೊಂದರೆಯನ್ನು ಅರ್ಥ ಮಾಡಿಕೊಂಡು, ಜನರ ಕಷ್ಟಗಳನ್ನು ಪರಿಹರಿಸಲು ಅದರಲ್ಲಿ ವಿಶೇಷವಾಗಿ ವಿದ್ಯಾರ್ಥಿಗಳ ಕಷ್ಟಗಳನ್ನು ಪರಿಹರಿಸಲು ತಕ್ಷಣ ಬೀದರ್ ಉತ್ಸವಕ್ಕಿಂತ ಮೊದಲು ಕೌಠಾ ಸೇತುವೆ ದುರಸ್ತಿ ಮಾಡಿ, ಸಂಚಾರಕ್ಕೆ ಮುಕ್ತವಾಗಿ ಅವಕಾಶ ಮಾಡಬೇಕಾಗಿ ಸಮಾಜ ಸೇವಕ ಗುರುನಾಥ್ ವಡ್ದೆಯವರು ಆಗ್ರಹಿಸಿದ್ದಾರೆ.