ಔರಾದ: ಸತ್ಯದ ಮಾತಿಗೆ ಮರಣದಂತ ಪ್ರಸಂಗ ಬಂದರೆ ಮರಣವೇ ಮಹಾನವಮಿ ಎಂದು ಸ್ವೀಕರಿಸಿ ಸಾಕ್ಷಿಯಾದವರು ಶರಣ ಹರಳಯ್ಯನವರು ಎಂದು ಪ್ರಾಂಶುಪಾಲ ನವೀಲಕುಮಾರ ಉತ್ಕಾರ ಹೇಳಿದರು.
ತಾಲೂಕಿನ ಸಂತಪುರ್ ಸಿದ್ದರಾಮೇಶ್ವರ ಪದವಿಪೂರ್ವ ಕಾಲೇಜಿನಲ್ಲಿ ಗುರುವಾರ ವೀರವೈರಾಗ್ಯನಿಧಿ ಅಕ್ಕಮಹಾದೇವಿ ಮತ್ತು ಕಾಯಕ ನಿಷ್ಠ ಶರಣ ಹರಳಯ್ಯರವರ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಬಸವಾದಿ ಶರಣರ ಸಿದ್ದಾಂತ ಸರ್ವಕಾಲಿಕ ಸತ್ಯವಾಗಿವೆ. ಮಾನವ ಧರ್ಮ ತತ್ವ ಬಿಡಬೇಡಿ, ನಡೆ ನುಡಿ ಒಂದಾದೆಡೆ ಜನ್ಮ ಕಡೆ, ವಚನಗಳೆಲ್ಲ ಪಚನ ಮಾಡಿಕೊಳ್ಳಬೇಕು. ಕಾಯಕ ನಿಷ್ಠೆಯಿಂದ ಕೈಲಾಸ ಕಾಣಬೇಕು. ಹೀಗೆ ಹಲವಾರು ವಿಚಾರಗಳನ್ನು ಕಾಯಕ ನಿಷ್ಠರಾದ ಶರಣ ಹರಳಯ್ಯರವರು ತತ್ವಗಳಾಗಿವೆ ಎಂದರು.
ಉಪನ್ಯಾಸಕ ಕಲ್ಲಪ್ಪ ಬುಟ್ಟೆ ಮಾತನಾಡಿ, ಸ್ವಾಭಿಮಾನದ ಪ್ರತೀಕ, ಸ್ತ್ರೀವಾದಿ ಚಳುವಳಿ ನಿಜವಾದ ಪ್ರತಿಪಾದಕರಾಗಿ, ಅಕ್ಕರೆಯ ಅಕ್ಕನಾಗಿ, ಕನ್ನಡ ಪ್ರಥಮ ಕವಿತ್ರಿಯಾಗಿ ಹಾಗೂ ಇಡೀ ಮಹಿಳಾ ಕುಲಕ್ಕೆ ಮಾದರಿಯದವರು ಅಕ್ಕಮಹಾದೇವಿಯವರು ಎಂದು ಹೇಳಿದರು.
ಈ ಸಂದರ್ಭದಲ್ಲಿ ಉಪನ್ಯಾಸಕಿ ವನದೇವಿ ಎಕ್ಕಳೆ ಮಾತನಾಡಿದರು. ಶಿವಪುತ್ರ ಧರಣಿ, ಸುಧಾ ಕೌಟಗೆ, ಮೀರಾತಾಯಿ ಕಾಂಬಳೆ, ಸುರೇಖಾ ದಡ್ಡೆ, ಅಂಬಿಕಾ ವಿಶ್ವಕರ್ಮ ಇತರರಿದ್ದರು.