ಔರಾದ: ತಾಲ್ಲೂಕಿನ ವಡಗಾಂವ ದೇ, ಜಂಬಗಿ ಸೇರಿ ಕೆಲವು ಗ್ರಾಮಗಳಲ್ಲಿ ಬುಧವಾರ ಸಂಭ್ರಮದಿಂದ ಹೋಳಿ ಹಬ್ಬ ಆಚರಿಸಲಾಯಿತು. ಚಿಣ್ಣರು, ಯುವಕರು ಹಾಗೂ ಮಹಿಳೆಯರು ಪರಸ್ಪರ ರಂಗು ಎರಚಿ ಸಂಭ್ರಮಿಸಿದರು.
ವಿವಿಧೆಡೆ ಬೆಳಿಗ್ಗೆ 7 ಗಂಟೆಯಿಂದಲೇ ಮಕ್ಕಳು ಬಣ್ಣ ಹಿಡಿದು ಬೀದಿಗೆ ಬಂದು ಹೋಳಿ ಹುಣ್ಣಿಮೆಗೆ ಚಾಲನೆ ನೀಡಿದರು. 10 ಗಂಟೆ ಹೊತ್ತಿಗೆ ದೊಡ್ಡವರೂ ಹೊರ ಬಂದು ಬಣ್ಣದಾಟಕ್ಕೆ ಮೆರುಗು ನೀಡಿದರು. ಯುವಕ-ಯುವತಿಯರು ಗುಂಪು ಗುಂಪಾಗಿ ಸಮೀಪದ ಗೆಳೆಯರ ಮನೆಗಳಿಗೆ ತೆರಳಿ ಬಣ್ಣ ಎರಚಿ ಸಂತಸಪಟ್ಟರು. ಬಣ್ಣ ಹಚ್ಚಿಕೊಂಡು ಕನ್ನಡದ ಜಾನಪದ ಹಾಡುಗಳಿಗೆ ಹೆಜ್ಜೆ ಹಾಕುತ್ತಿದ್ದ ಯುವಕರ ಗುಂಪು ರಂಗಿನಾಟ್ಟಕ್ಕೆ ವಿಶೇಷ ಮೆರುಗು ತಂದುಕೊಟ್ಟಿತು.