ಔರಾದ: ಚಾಲಕನ ನಿಯಂತ್ರಣ ತಪ್ಪಿ ಲಾರಿಯೊಂದು ಪಲ್ಟಿಯಾಗಿದ್ದು ಚಾಲಕ ಗಾಯಗೊಂಡ ಘಟನೆ ಔರಾದ ತಾಲೂಕಿನ ಚಿಂತಾಕಿ ಗ್ರಾಮದ ಸಮೀಪ ಜರುಗಿದೆ.
ಘಟನೆಯಲ್ಲಿ ಚಿಕ್ಲಿ ಜೆ ಗ್ರಾಮದ ರಾಜು ಗೊಂಡ (35) ಗಾಯಗೊಂಡ ಚಾಲಕ. ಲಾರಿಯಲ್ಲಿ ಹೋಗುವಾಗ ಚಾಲಕನ ನಿಯಂತ್ರಣ ತಪ್ಪಿ ಈ ಅವಘಡ ಸಂಭವಿಸಿದೆ. ಘಟನೆ ಸಂಬಂಧಿಸಿದಂತೆ ಚಿಂತಾಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.