ಔರಾದ: ಔರಾದ ತಾಲೂಕಿನ ಆಲೂರ (ಕೆ) ಗ್ರಾಮದಲ್ಲಿ ಮಹಾಲಕ್ಷ್ಮೀ ಪೂಜಾ ಕಾರ್ಯಕ್ರಮ ಸಂಭ್ರಮ ಮತ್ತು ಸಡಗರದಿಂದ ಆಚರಿಸಲಾಯಿತು.
ಔರಾದ ಏಕತಾ ಫೌಂಡೇಶನ್ ಅಧ್ಯಕ್ಷರು, ನಮ್ಮೆಲ್ಲರ ಹೆಮ್ಮೆಯ ನಾಯಕರು, ಉತ್ಸಾಹಿ ಜನಸೇವಕ ರವೀಂದ್ರ ಸ್ವಾಮಿಯವರು ಲಕ್ಷ್ಮೀ ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಪುಷ್ಪವೃಷ್ಟಿ, ಮಹಾ ಮಂಗಳಾರತಿ ಬೆಳಗಿ ತಾಯಿಯ ಕೃಪೆಗೆ ಪಾತ್ರರಾದರು. ಇದೇ ವೇಳೆ ಗ್ರಾಮ ಪಂಚಾಯತ್ ಸದಸ್ಯರಾದ ಶಿವಾನಂದ ಜಾಬಾ, ಪ್ರಮುಖರಾದ ಶ್ರೀಕಾಂತ ಅಲ್ಲಾಪೂರ, ಮಾಣಿಕ ಚವ್ಹಾಣ, ಶ್ರೀಕಾಂತ ಪಾಟೀಲ, ಮಲ್ಲಿಕಾರ್ಜುನ ಬಸಗೊಂಡೆ, ಪ್ರವೀಣ ಕೋಬಿಹಾಳ, ಬಸಯ್ಯ ಸ್ವಾಮಿ ಕಮಠಾಣಾ ಸೇರಿದಂತೆ ಗ್ರಾಮದ ಹಿರಿಯ ಮುಖಂಡರು, ತಾಯಂದಿರು, ಯುವಕರು ಮತ್ತು ಮಕ್ಕಳು ಪೂಜೆಯಲ್ಲಿ ಪಾಲ್ಗೊಂಡರು.