ಔರಾದ: ಪಶು ಸಂಗೋಪನೆ ಸಚಿವ ಪ್ರಭು.ಬಿ ಚವ್ಹಾಣ ಅವರು ಇಂದು ಔರಾದ(ಬಿ) ವಿಧಾನಸಭಾ ಕ್ಷೇತ್ರದ ಕೋರೆಕಲ್, ಹೆಡಗಾಪೂರ ಸೇರಿದಂತೆ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ಅಕಾಲಿಕ ಮಳೆಯಿಂದಾಗಿ ಉಂಟಾಗಿರುವ ಬೆಳೆ ಹಾನಿಯನ್ನು ವೀಕ್ಷಿಸಿ ರೈತರ ಸಮಸ್ಯೆಗಳನ್ನು ಆಲಿಸಿದರು.
ಹಾನಿಗೀಡಾದ ಪ್ರದೇಶಗಳಿಗೆ ಭೇಟಿ ನೀಡಿದ ಸಚಿವರು, ಹಾನಿ ಪ್ರಮಾಣದ ಬಗ್ಗೆ ರೈತರಿಂದ ಮಾಹಿತಿ ಪಡೆದರು. ಜಂಟಿ ಸಮೀಕ್ಷೆ ನಡೆಸುವಂತೆ ಈಗಾಗಲೇ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದೇನೆ. ರೈತರು ಆತಂಕ ಪಡಬಾರದು. ಬೆಳೆ ಹಾನಿಯಾದ ರೈತರಿಗೆ ಸರ್ಕಾರದಿಂದ ಅಗತ್ಯ ಪರಿಹಾರ ಬಿಡುಗಡೆ ಮಾಡಲು ಕ್ರಮ ವಹಿಸಲಾಗುವುದು ಎಂದು ತಿಳಿಸಿದರು.
ಆಲಿಕಲ್ಲು ಸಮೇತ ಸುರಿದ ಭಾರೀ ಮಳೆಯಿಂದ ಹಲವೆಡೆ ಜೋಳ, ಕುಸುಬೆ, ಟೊಮ್ಯಾಟೊ, ಈರುಳ್ಳಿ, ಮೆಣಸಿನಕಾಯಿ ಹೀಗೆ ಸಾಕಷ್ಟು ಕೃಷಿ ಮತ್ತು ತೋಟಗಾರಿಕೆ ಬೆಳೆಗಳು ನಷ್ಟವಾಗಿವೆ. ಅಧಿಕಾರಿಗಳು ಬೆಳೆ ಹಾನಿಯಾದ ಹೊಲಗಳಿಗೆ ಭೇಟಿ ನೀಡಿ ನಿಖರ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಬೇಕೆಂದು ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಈ ಸಂದರ್ಭದಲ್ಲಿ ಕಮಲಗರ ತಹಸೀಲ್ದಾರ ಮಲ್ಲಿಕಾರ್ಜುನ, ಕೆ.ನಾಗರಾಜ, ಮುಖಂಡರಾದ ರಾಮಶೆಟ್ಟಿ ಪನ್ನಾಳೆ, ಶ್ರೀಮಂತ ಪಾಟೀಲ, ರಾಜಕುಮಾರ ಸೋರಳ್ಳೆ, ಶಿವಲಿಂಗ ಚಿಟ್ಟಾ, ಮನೋಹರ ಹೂಗಾರ, ಬಸವರಾಜ ಹಲ್ಬುರ್ಗೆ, ರಾಜಪ್ಪ ಯರನಾಳೆ, ವಿಜಯಕುಮಾರ, ಲಾಲಹ್ಮದ ಬಾಗವಾನ್, ಮಹಾದೇವ ಕುಣಿಕೇರೆ, ಪ್ರದೀಪ ದೇಸಾಯಿ, ಹಣಮಂತ ಯರನಾಳೆ, ರಮೇಶ ಶಟಕಾರ, ಅಣ್ಣೆಪ್ಪ ಗಂದಗೆ, ಶಂಕ್ರಯ್ಯಾ ಸ್ವಾಮಿ, ಪ್ರಕಾಶ ಬೆಳಕುಣಿ, ಧನರಾಜ ಬೆಳಕುಣಿ, ಮಲ್ಲಪ್ಪ ರಾಮಶೆಟ್ಟೆ, ಮಾಂತೇಶ ಸಂತಪೂರೆ, ಕೃಷಿ, ತೋಟಗಾರಿಕೆ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಮುಖಂಡರು ಉಪಸ್ಥಿತರಿದ್ದರು.