ಔರಾದ: ಪಶು ಸಂಗೋಪನೆ ಸಚಿವರಾದ ಪ್ರಭು. ಬಿ ಚವ್ಹಾಣ ಔರಾದ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ 15ಕ್ಕೂ ಹೆಚ್ಚು ಗ್ರಾಮಗಳಲ್ಲಿ ಸಂಚರಿಸಿ ಸಾರ್ವಜನಿಕರನ್ನು ಭೇಟಿ ಮಾಡಿದರು.
ಡೋಣಗಾಂವ ವಾಡಿ, ರಂಡ್ಯಾಳ, ಕೊಟಗ್ಯಾಳ, ರಾಂಪೂರ, ಕಮಲನಗರ, ಮುರುಗ(ಕೆ), ಬಾಳೂರ, ಹೊರಂಡಿ, ಸೋನಾಳ, ಸೋನಾಳವಾಡಿ, ಕಾಳಗಾಪೂರ, ಹುಲಸೂರು, ಖೇಡ್, ಚಾಂಡೇಶ್ವರ, ಡಿಗ್ಗಿ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಸಂಚರಿಸಿ ಕಾರ್ಯಕರ್ತರನ್ನು ಭೇಟಿಯಾಗಿ ಪಕ್ಷದ ಕಾರ್ಯಚಟುವಟಿಕೆಗಳ ಬಗ್ಗೆ ಚರ್ಚಿಸಿದರು. ಗ್ರಾಮಗಳಲ್ಲಿ ಈವರೆಗೆ ಆಗಿರುವ ಮತ್ತು ಮುಂದಿನ ದಿನಗಳಲ್ಲಿ ತೀವ್ರ ಗತಿಯಲ್ಲಿ ಮಾಡಬೇಕಾಗಿರುವ ಅಭಿವೃದ್ಧಿ ಕೆಲಸಗಳ ಬಗ್ಗೆ ಸ್ಥಳೀಯರು ಸಚಿವರ ಗಮನಕ್ಕೆ ತಂದರು.
ಹೊಸ ತಾಲ್ಲೂಕಾಗಿರುವ ಕಮಲನಗರದಲ್ಲಿ ಇಲ್ಲಿವರೆಗೆ ಉತ್ತಮ ಕೆಲಸಗಳಾಗಿವೆ. ನೂತನ ತಾಲ್ಲೂಕಾಗಿರುವುದರಿಂದ ಹಂತ ಹಂತವಾಗಿ ಅಭಿವೃದ್ಧಿ ಕೆಲಸಗಳು ನಡೆಯುತ್ತವೆ. ರಸ್ತೆ, ಕುಡಿಯುವ ನೀರು, ಶಾಲಾ ಕಾಲೇಜುಗಳು, ವಿದ್ಯಾರ್ಥಿಗಳಿಗಾಗಿ ವಸತಿ ನಿಲಯಗಳು, ಅಂಗನವಾಡಿ ಕಟ್ಟಡಗಳು ಇಂತಹ ಮೂಲಭೂತ ಅವಶ್ಯಕತೆಗಳನ್ನು ಪೂರೈಸುವ ಕೆಲಸವನ್ನು ಆದ್ಯತೆಯ ಮೇಲೆ ಮಾಡಲಾಗಿದೆ. ಕಮಲನಗರ ಸಮಗ್ರ ಅಭಿವೃದ್ಧಿಯಾಗಬೇಕು ಎನ್ನುವುದೇ ನನ್ನ ಸಂಕಲ್ಪವಾಗಿದೆ ಎಂದು ಸಚಿವರು ತಿಳಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ರಾಮಶೆಟ್ಟಿ ಪನ್ನಾಳೆ, ದೇವಾನಂದ ದೇಶಮುಖ, ಶಾಂತಕುಮಾರ ದೇಶಮುಖ, ಗಣೇಶ ಕಾರಭಾರಿ, ಸಂಜೀವ ಪಾಟೀಲ, ಸಚಿನ್ ರಾಠೋಡ, ಶಿವಕುಮಾರ ಝುಲ್ಫೆ, ಶಿವಾನಂದ ವಡ್ಡೆ, ಬಂಟಿ ರಾಂಪೂರೆ, ನಾಗೇಶ್ ಪತ್ರೆ, ರಂಗರಾವ ಜಾಧವ್, ಶ್ರೀನಿವಾಸ ಖೂಬಾ, ಮಾಧವರಾವ ಚಾಂಗೂಣೆ, ಸಂತೋಷ ಸೋಲಾಪೂರೆ, ಸಂತೋಷ ತೋರ್ಣೆಕರ, ಎಂ.ಡಿ ಸಲಾವುದ್ದಿನ್, ಹಣಮಂತ ಸುರನಾರ, ಖಂಡೋಬಾ ಕಂಗಟೆ, ಪ್ರಕಾಶ ಚಾಂಗೂಣೆ, ಬಸವರಾಜ ಪಾಟೀಲ, ಶಿವಾಜಿರಾವ ಧುಡಕನಾಳೆ, ಬಾಲಾಜಿ ತೇಲಂಗ್ ಹಾಗೂ ಇತರರು ಉಪಸ್ಥಿತರಿದ್ದರು.