ಔರಾದ: ತಾಲೂಕಿನಲ್ಲಿ ಬೇಸಿಗೆ ಆರಂಭವಾಗುವ ಮುನ್ನವೇ ಮಾಹಾರಾಜವಾಡಿ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಆರಂಭವಾಗಿದೆ. ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು, ಜನ ಪ್ರತಿನಿಧಿಗಳು, ಅಧಿಕಾರಿಗಳು ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಕ್ರಮ ಕೈಗೊಳ್ಳುತ್ತಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.
ಜಂಬಗಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಮಾಹಾರಾಜವಾಡಿ ಗ್ರಾಮದಲ್ಲಿ ಎರಡು ದಿವಸದಿಂದ ಕುಡಿಯುವ ನೀರಿನ ಸಮಸ್ಯೆ ಹೆಚ್ಚಾಗಿದ್ದು, ಎರಡು ದಿವಸವಾದರು ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರ ಸಿಗದ೦ತಾಗಿದೆ. ಗ್ರಾಮದಲ್ಲಿ 15 ವರ್ಷದ ಹಿಂದೆ ನೆಲದಲ್ಲಿ ಹಾಕಿದ ನೀರಿನ ಪೈಪ್‌ಗಳು ಸಂಪೂರ್ಣ ಕೊಳೆತು ಹೋಗಿದೆ. ಸಮಯಕ್ಕೆ ಸರಿಯಾಗಿ ನೀರು ಸರಬರಾಜುವಾಗುತಿಲ್ಲ. ಹೀಗಾಗಿ ಗ್ರಾಮ ಪಂಚಾಯತಿಯ ಅಧಿಕಾರ ಕೂಡಲೆ ಗ್ರಾಮದಲ್ಲಿ ಹೊಸ ಪೈಪಲೈನ್ ಮಾಡಿಸಲಿ. ಸದ್ಯ ಗ್ರಾಮದಲ್ಲಿ ನೀರು ಬರದೇ ಇರದ ಕಾರಣ ದೂರದ ತಾಂಡಾದಿಂದ ಬೈಕ್ ಮೇಲೆ ನೀರು ತರುವಂತವಾಗಿದೆ. ಗ್ರಾಮದಲ್ಲಿ ಅಂದಾಜು 150 ಮನೆಗಳಿದ್ದು ಗ್ರಾಮದ ಪ್ರಮುಖ ಓಣಿಗಳಲ್ಲಿನ ಬೋರವೈಲ ಗ್ಯಾಪ್ ಕೊಡಲು ಆರಂಭಿಸಿವೆ ಜಿಲ್ಲಾಡಳಿತ ಮಾಹಾರಾಜವಾಡಿ ಗ್ರಾಮಕ್ಕೆ ಕುಡಿಯುವ ನೀರಿನ ವ್ಯವಸ್ಥೆ ಮಾಡಲಿ ಎಂದು ಗ್ರಾಮಸ್ಥರು ಆಗ್ರಹಿಸಿದರು.
ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಹೆಚ್ಚಾಗಿದೆ ಎಂದು ಎರಡು ದಿವಸದ ಹಿಂದೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಗಮನಕ್ಕೆ ತಂದರೂ ನೀರಿನ ಸಮಸ್ಯೆಗೆ ಪರಿಹಾರ ದೊರೆತಿಲ್ಲ ಇದಕ್ಕೆಲ್ಲಾ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ ಎಂದು ಗ್ರಾಮಸ್ಥರಾದ ಶಿವಕುಮಾರ ಮಾಹಾರಾಜವಾಡಿ ಅಭಿಪ್ರಾಯಪಟ್ಟಿದ್ದಾರೆ.