ಔರಾದ: ಸಂಕ್ರಾಂತಿ ಹಬ್ಬದ ಮಾರನೇ ದಿನ ಆಚರಿಸುವ ಕರಿ ಹಬ್ಬದ ನಿಮಿತ್ಯ ಇಂದು ಮಾಂಸ ಖರೀದಿಗೆ ಜನ ಮುಗಿ ಬಿದ್ದರು.
ಔರಾದ ತಾಲೂಕಿನ ಜಂಬಗಿ, ಸಂತಪುರ, ವಡಗಾಂವ, ಚಿಂತಾಕಿ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಚಿಕನ್ ಹಾಗೂ ಮಟನ್ ಖರೀದಿಗೆ ಜನ ಮುಗಿಬಿದ್ದರು. ಬೆಳಗ್ಗೆಯೆ ಮಾಂಸ ಖರೀದಿಗೆ ಜನರ ದಂಡು ಮಾರುಕಟ್ಟೆಯತ್ತ ಮುಖಮಾಡಿತು. ಬೇಡಿಕೆ ಹೆಚ್ಚಳದ ದುರ್ಲಾಭ ಪಡೆದ ಮಾಂಸದ ಅಂಗಡಿ ಮಾಲೀಕರು ಕೆಜಿ ಚಿಕನ್ 200ರಿಂದ 300 ರೂ, ಹಾಗೂ ಮಟನ್ 600ರಿಂದ 800 ರೂ ತನಕ ಮಾರಾಟ ಮಾಡಿದರು. ಮಾಂಸದ ಅಂಗಡಿಗಳಲ್ಲಿ ಗ್ರಾಹಕರ ಖರೀದಿ ಜೋರಾಗಿ ನಡೆಯಿತು