ಔರಾದ: ಬೀದರ ಕಾರ್ಯ ಮತ್ತು ಪಾಲನೆ ವಿಭಾಗದ ವ್ಯಾಪ್ತಿಯಲ್ಲಿ ಔರಾದ(ಬಾ) ಉಪ ವಿಭಾಗದ ಸಂತಪೂರ ಉಪ-ಕೆಂದ್ರದಲ್ಲಿ ತುರ್ತು ಕೆಲಸದ ಪ್ರಯುಕ್ತ ಮಂಗಳವಾರ ಬೆಳ್ಳಿಗೆ 8 ಗಂಟೆಯಿಂದ ಮಧ್ಯಾಹ್ನ 3 ಗಂಟೆಯವರೆಗೆ ವಿದ್ಯುತ ವ್ಯತ್ಯಯ ಉಂಟಾಗಲಿದೆ ಕಾರಣ ಗ್ರಾಹಕರು ಸಹಕರಿಸಬೇಕೆಂದು ಸಹಾಯಕ ಕಾರ್ಯನಿರ್ವಾಹಕ ಅಭಿಯಂತರು ಮನವಿ ಮಾಡಿದ್ದಾರೆ.
ತಾಲೂಕಿನ 11ಕೆ.ವಿ ಸಂತಪೂರ, 11ಕೆ.ವಿ ಕೌಠಾ, 11ಕೆ.ವಿ ಬಲ್ಲೂರ, 11ಕೆ.ವಿ ಜಿ.ಎನ್.ವ್ಯಾ ವಾಟರ ಸಪ್ಪೆ, 11ಕೆ.ವಿ ಚಾಂದೂರಿ, IIಕೆ.ವಿ ಅರಬನ್ ಪಾಟರ ಸಪ್ಪೆ, ಕೆ.ವಿ ಹೆಡಗಾಪೂರ, 11ಕೆ. ವಿ ಜೋನಿಕೇರಿ, 11 ಕೆ.ವಿ ಹಿಪ್ಪಳಗಾಂವ ಮತ್ತು 33ಕೆ.ವಿ ವಡಗಾಂವ, 33ಕೆ.ವಿ. ಮುಧೋಳ, ಫೀಡರನಲ್ಲಿ ವಿದ್ಯುತ ವ್ಯತ್ಯಯ ಉಂಟಾಗುತ್ತದೆ ಎಂದು ಸಹಾಯಕ ಕಾರ್ಯನಿರ್ವಾಹಕ ಅಭಿಯಂತರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.