ಔರಾದ: ಪಶು ಸಂಗೋಪನೆ ಸಚಿವ ಪ್ರಭು.ಬಿ ಚವ್ಹಾಣ ಅವರು ಮಾರ್ಚ್ 11ರಂದು ಔರಾದ ಹಾಗೂ ಕಮಲನಗರ ತಾಲ್ಲೂಕಿನ 16ಕ್ಕೂ ಹೆಚ್ಚು ಗ್ರಾಮಗಳಲ್ಲಿ ಸಂಚರಿಸಿ 10 ಕೋಟಿಯ ಖಾನಾಪೂರ ಏತ ನೀರಾವರಿ ಯೋಜನೆ ಸೇರಿದಂತೆ ಸುಮಾರು 20 ಕೋಟಿ ಮೊತ್ತದ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕು ಸ್ಥಾಪನೆ ನೆರವೇರಿಸಿದರು.
ಲಿಂಗಿಯಲ್ಲಿ 149.42 ಲಕ್ಷದ ಜಲ ಜೀವನ ಮಿಷನ್ ಕಾಮಗಾರಿ, ಲಿಂಗಿ ವ್ಯಾಪ್ತಿಯ ಧನಸಿಂಗ್ ತಾಂಡಾದಲ್ಲಿ 31.82 ಲಕ್ಷದ ಜಲ ಜೀವನ ಮಿಷನ್ ಕಾಮಗಾರಿ, ರಾಮು ನಾಯಕ್ ತಾಂಡಾದಲ್ಲಿ 32.84 ಲಕ್ಷದ ಜಲ ಜೀವನ ಮಿಷನ್ ಕಾಮಗಾರಿ, ಖೇರ್ಡಾ ಗ್ರಾಮದಲ್ಲಿ 13 ಲಕ್ಷದ ಶುದ್ಧ ಕುಡಿಯುವ ನೀರಿನ ಘಟಕ, ಡೋಣಗಾಂವ್.ಎಂ ಗ್ರಾಮದಲ್ಲಿ 100 ಲಕ್ಷದ ಡೋಣಗಾಂವ್ ನಿಂದ ಮುರ್ಕಿವರೆಗಿನ ರಸ್ತೆ ಸುಧಾರಣೆ ಕಾಮಗಾರಿ, ಬಸನಾಳ ಗ್ರಾಮದಲ್ಲಿ 13 ಲಕ್ಷದ ಶುದ್ಧ ಕುಡಿಯುವ ನೀರಿನ ಘಟಕ, 9.50 ಲಕ್ಷದ ಸಮುದಾಯ ಭವನ ಹಾಗೂ 74.66 ಲಕ್ಷದ ಜಲ ಜೀವನ ಮಿಷನ್ ಕಾಮಗಾರಿಗೆ ಚಾಲನೆ ನೀಡಿದರು. ಸಂಗಮ್ ಗ್ರಾಮದಲ್ಲಿ 16 ಲಕ್ಷ ಮೊತ್ತದಲ್ಲಿ 12 ಮೀಟರ್ ಎತ್ತರ ಹೈಮಾಸ್ಟ್ ವಿದ್ಯುತ್ ದೀಪ, ಬಳತ್(ಕೆ) ಗ್ರಾಮದಲ್ಲಿ 13 ಲಕ್ಷದ ಶುದ್ಧ ಕುಡಿಯುವ ನೀರಿನ ಘಟಕ, ಠಾಣಾಕುಶನೂರನಲ್ಲಿ 16 ಲಕ್ಷದ 12 ಮೀಟರ್ ಎತ್ತರದ ಹೈಮಾಸ್ಟ್ ವಿದ್ಯುತ್ ದೀಪ, ರಕ್ಷ್ಯಾಳ್ ಗ್ರಾಮದಲ್ಲಿ 100 ಲಕ್ಷ ಅನುದಾನದ ರಕ್ಷ್ಯಾಳ ಕ್ರಾಸ್ ನಿಂದ ರಕ್ಷ್ಯಾಳ(ಕೆ) ವರೆಗೆ ರಸ್ತೆ ಸುಧಾರಣೆ ಕಾಮಗಾರಿ, ಮಸ್ಕಲ್ ತಾಂಡಾದಲ್ಲಿ 33.39 ಲಕ್ಷ, ಕೌಡಗಾಂವನಲ್ಲಿ 107.62 ಲಕ್ಷ ಹಾಗೂ ಬಲ್ಲೂರ(ಜೆ)ನಲ್ಲಿ 104.02 ಲಕ್ಷದ ಜಲ ಜೀವನ ಮಿಷನ್ ಕಾಮಗಾರಿಗೆ ಸಚಿವರು ಭೂಮಿ ಪೂಜೆ ನೆರವೇರಿಸಿದರು.
ಕೌಠಾ(ಕೆ) ಗ್ರಾಮದಲ್ಲಿ 40 ಲಕ್ಷದ ಎರಡು ಸಿಸಿ ರಸ್ತೆ ಕಾಮಗಾರಿಗಳು, ಗಡಿಕುಶನೂರಿನಲ್ಲಿ 122.65 ಲಕ್ಷದ ಜಲ ಜೀವನ ಮಿಷನ್ ಕಾಮಗಾರಿ ಹಾಗೂ ಕಂದಗೂಳನಲ್ಲಿ 13 ಲಕ್ಷದ ಶುದ್ಧ ಕುಡಿಯುವ ನೀರಿನ ಘಟಕ ಅಳವಡಿಸುವ ಕಾಮಗಾರಿಗೆ ಸಚಿವ ಪ್ರಭು.ಬಿ ಚವ್ಹಾಣ ಅವರು ಶಂಕುಸ್ಥಾಪನೆ ನೆರವೇರಿಸಿದರು.