ಔರಾದ: ಅಲ್ಲಾಪೂರ ಗ್ರಾಮದಲ್ಲಿ ರಾಜಕುಮಾರ ನರಸಿಂಗರಾವ್ ಎಂಬ ವ್ಯಕ್ತಿ ಕೆಲವು ದಿನಗಳಿಂದ ತೀವ್ರ ಅನಾರೋಗ್ಯ ಸಮಸ್ಯೆ ಎದುರಿಸುತ್ತಿದ್ದಾರೆ ಎಂದು ಸ್ಥಳೀಯರು ಗಮನಕ್ಕೆ ತರುತ್ತಿದ್ದಂತೆ ಸಚಿವ ಯುವಕನ ಮನೆಗೆ ಭೇಟಿ ಆರೋಗ್ಯ ವಿಚಾರಿಸಿದರು.
ಉತ್ತಮ ಚಿಕಿತ್ಸೆ ಪಡೆದು ಶೀಘ್ರ ಗುಣಮುಖವಾಗಬೇಕು. ಯಾವುದೇ ಕಾರಣಕ್ಕೂ ಮನೋಸ್ಥೈರ್ಯ ಕಳೆದುಕೊಳ್ಳಬಾರದು ಎಂದು ಧೈರ್ಯ ಹೇಳಿ ವೈಯಕ್ತಿಕ ಧನಸಹಾಯ ಮಾಡಿದರು. ಇದೇ ವೇಳೆ ಸಚಿವರು ಆತ್ಮಹತ್ಯೆಗೆ ಒಳಗಾದ ರೈತ ಆನಂದರಾವ ಪಾಟೀಲ್ ಅವರ ಮನೆಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿ ಧನಸಹಾಯ ಮಾಡಿದರು. ನಂದ್ಯಾಳ ಗ್ರಾಮಕ್ಕೆ ಭೇಟಿ ನೀಡಿದಾಗ, ಅಪಘಾತಕ್ಕೆ ಒಳಗಾಗಿ ಚಿಕಿತ್ಸೆ ಪಡೆಯುತ್ತಿರುವ ಮುಖಂಡರಾದ ರಮೇಶ ಪಾಟೀಲ್ ಅವರನ್ನು ಭೇಟಿಯಾಗಿ ಆರೋಗ್ಯ ವಿಚಾರಿಸಿದರು.
ಈ ಸಂದರ್ಭದಲ್ಲಿ ಪ್ರಕಾಶ ಅಲ್ಮಾಜೆ, ಕೇರಬಾ ಪವಾರ, ಸಂತೋಷ ಪೋಕಲವಾರ, ಸಚಿನ ರಾಠೋಡ, ಶರಣಪ್ಪ ಪಂಚಾಕ್ಷರಿ, ಹನುಮಂತ ಸುರನಾರ, ರಮೇಶ ಪಾಟೀಲ್, ರಾವಸಾಬ್ ಪಾಟೀಲ ಜಕನಾಳ ಸೇರಿದಂತೆ ಇತರರು ಉಪಸ್ಥಿತರಿದ್ದರು.