ಔರಾದ: ಜಾತ್ರಾ ಮಹೋತ್ಸವದ ನಿಮಿತ್ಯ ತಾಲೂಕಿನ ಮಣಿಗ್ಯಾಂಪುರ ಗ್ರಾಮಕ್ಕೆ ಏಕತಾ ಫೌಂಡೇಶನ್ ಅಧ್ಯಕ್ಷ ರವೀಂದ್ರ ಸ್ವಾಮಿ ಭೇಟಿ ನೀಡಿ ದೇವರ ದರ್ಶನ ಹಾಗೂ ಪೂಜ್ಯ ಶ್ರೀ ಗುರುಬಸವ ಪಟ್ಟದ್ದೇವರ ಆಶೀರ್ವಾದ ಪಡೆದರು.
ನಂತರ ಮಾತನಾಡಿದ ಅವರು, ಶಾಸಕ ಪ್ರಭು ಚವ್ಹಾಣ ತಮ್ಮ ಸಮುದಾಯದವರ ಮತ ಬ್ಯಾಂಕ್‌ಗಾಗಿ, ಸದಾಶಿವ ಆಯೋಗದ ವರದಿ ಜಾರಿಯಾಗಿಲ್ಲ ಎಂದು ಸುಳ್ಳು ಸುದ್ದಿಯನ್ನು ಹರಡಿಸುತ್ತಿದ್ದಾರೆ. ಅಲ್ಲದೇ, ಯಾವುದೇ ತಾಂಡಾಗಳಿಗೆ ಅನ್ಯ ಧರ್ಮೀಯರು ಹಾಗೂ ಅನ್ಯ ಪಕ್ಷದವರು ಭೇಟಿ ಕೊಟ್ಟರೆ ಅವರನ್ನು ಹೊಡೆಯಿರಿ-ಬಡಿಯಿರಿ ಎಂದು ಹೇಳುತ್ತಿರುವ ವಿಡಿಯೋ ವೈರಲ್ ಆಗಿದೆ. ಇವರೆಲ್ಲಾ ಎಷ್ಟೇ ತಿಪ್ಪರಲಾಗ ಹಾಕಿ ಅಡ್ಡಿಪಡಿಸಿದರೂ ಏಪ್ರಿಲ್ 19ರಂದು ನಾನು ನಾಮಪತ್ರ ಸಲ್ಲಿಸುವುದು ಮಾತ್ರ ಶತಸಿದ್ಧ ಎಂದು ಹೇಳಿದರು.
ಈ ಸಂದರ್ಭದಲ್ಲಿ ಬಾಬುರಾವ ಪಾಟೀಲ, ಬಸವರಾಜ ಪಾಟೀಲ, ರತಿಕಾಂತ್ ಸ್ವಾಮಿ, ಬಾಬಶೆಟ್ಟಿ, ರಮೇಶ ಬಿರಾದಾರ, ಮಹಾದೇವ ಮಾಲಿಪಾಟೀಲ ಸೇರಿದಂತೆ ಇತರರು ಉಪಸ್ಥಿತರಿದ್ದರು.