ಔರಾದ: ತಾಲೂಕಿನ ಖಾನಪುರ ಗ್ರಾಮಕ್ಕೆ ಆಗಮಿಸಿದ ರಿಲಯನ್ಸ್ ಫೌಂಡೇಷನ್ ಮುಂಬೈ ಶಾಖೆಯ ಗ್ರಾಮೀಣ ಪ್ರಸರಣ ಮುಖ್ಯಸ್ಥೆ ಪ್ರಿಯಾಂಕಾ ಸಿಂಗ್ ಅವರಿಗೆ ಗ್ರಾಮಸ್ಥರು ಹಾಗು ಮಹಿಳೆಯರು ತಲೆಯ ಮೇಳೆ ಕಳಸಗಳನ್ನು ಹೊತ್ತು ಭಾಜ ಭಜಂತ್ರಿಯೊಂದಿಗೆ ಭವ್ಯವಾಗಿ ಸ್ವಾಗತಿಸಿ ಬರ ಮಾಡಿಕೊ೦ಡರು.
ಗ್ರಾಮದ ಮೌಲಾಲಿ ದರ್ಗಾದಿ೦ದ ಬಸವ ಮಂಟಪದವರೆಗೆ ಮೆರವಣಿಗೆಯೊಂದಿಗೆ ಬರ ಮಾಡಿ ಕೊ೦ಡು ಬಸವ ಮ೦ಟಪದಲ್ಲಿ ವಿಶ್ವಗರು ಬಸವಣ್ಣನವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದ ನಂತರ ಗ್ರಾಮಸ್ಥರೊಂದಿಗೆ ಮಹಿಳಾ ಅಧಿಕಾರಿಯವರು ಗ್ರಾಮದಲ್ಲಿ ನೀರಿನ ಸಮಸ್ಯೆ, ಮಳೆಯ ಪ್ರಮಾಣ, ಮಳೆ ನೀರು ಸಂಗ್ರಹಣೆಗೆ ಗ್ರಾಮಸ್ಥರು ಕೈಗೊಂಡ ನಿರ್ಣಯಗಳು, ನೀರಿನ ಅಂತರ್ಜಲ ಮಟ್ಟ ಕಾಪಾಡಲು ರಿಲಯನ್ ಫೌಂಡೇಷನ್ ಮಾಡುತ್ತಿರುವ ಕಾರ್ಯಕ್ರಮಗಳು, ಮು೦ದಿನ ನಾಲ್ಕು ವರ್ಷಗಳಲ್ಲಿ ಆರ್‌ಎಫ್ ನಿಂದ ಮಾಡಬಹುದಾದ ಅಭಿವೃದ್ಧಿ ಕಾರ್ಯಗಳ ಬಗ್ಗೆ ಮಹತ್ವದ ಸಭೆ ಜರುಗಿತು. ತದನ೦ತರ ರಿಲಯನ್ಸ್ ಫೌಂಡೇಷನ್ 3.0 ಯೋಜನೆಯಲ್ಲಿ ಗ್ರಾಮದಲ್ಲಿ ಕಳೆದ ಆರು ತಿಂಗಳಲ್ಲಿ ಜರುಗಿದ ಅಭಿವೃದ್ಧಿ ಕೆಲಸಗಳಾದ ರಿಲಯನ್ಸ್ ಪೋಷಕಾಂಶಗಳ ಕೈ ತೋಟ, ಕಡಲೆ, ತೋಗರಿ ಬೆಳೆಗಳ ರೈತರಿಗೆ ನೀಡಿದ ಡೆಮೋ ಮಾಹಿತಿ, ಧಾನ್ಯಗಳ ಇಳುವರಿ, ರೈತ ಉತ್ಪಾದಕರ ಕಂಪನಿಯಲ್ಲಿ ಎಂ ಎಸ್ ಪಿ ಮಾಹಿತಿ, ಖಡಕ್ ನಾಥ ಕೋಳಿ, ಅಜೋಲಾ ಮೇವಿನ ಬೇಳೆ ಸೇರಿದಂತೆ ಇನ್ನಿತರ ಕಾರ್ಯಗಳನ್ನು ವೀಕ್ಷಣೆ ಮಾಡಿದರು.
ಕೊನೆಗೆ ರೈತ ಕಲ್ಲಪ್ಪ ಬಿರಾದರ್ ಅವರ ಜಮೀನಿನಲ್ಲಿ ರಿಲಯನ್ಸ್ ಫೌಂಡೇಷನ್ ವತಿಯಿಂದ ನಿರ್ಮಿಸಿದ ಗೇಟೇಡ್ ಚೆಕ್ ಡ್ಯಾಂ ಅನ್ನು ಕಾಯಿ ಕರ್ಪೂರ ಒಡೆದು ಮಹಿಳಾ ಅಧಿಕಾರಿಯವರ ಹಸ್ತದಿಂದ ಚಾಲನೆ ನೀಡಿ ಗ್ರಾಮಸ್ಥರ ಸದುಪಯೋಗಕ್ಕೆ ನೀಡಲಾಯಿತು.
ಈ ಸಂದರ್ಭದಲ್ಲಿ ಕಲ್ಲಪ್ಪ ಬಿರಾರ್ದ, ಆಶಾರಾಣಿ, ಸೋನು, ಪೂಜಾ, ಬಬಿತಾ, ಅರ್ಚನಾ, ರೇಣುಕಾ, ಪ್ರಿಯಾ, ಷನ್ಮುಖ, ಮೈನೋದ್ದಿನ್, ಅನೀತಾ, ರೇಖಾ, ಶಾಂತಮ್ಮ, ನೀಲೇಶ, ಕಾಶಿನಾಥ, ಆಯೂಬ್ ಖಾನ್ ಪಟೇಲ್, ದೇವಿದಾಸ್ ರಾವ್, ನೀಲಾಂಬಿಕಾ, ಸವೀತಾ ಸೇರಿದಂತೆ ಇತರರಿದರು.