ಔರಾದ: ಎನ್‌ಎಸ್‌ಯುಐ ಜಿಲ್ಲಾಧ್ಯಕ್ಷ ಸಚಿನ್ ಮಲ್ಕಾಪುರೆಗೆ ಬೆಂಗಳೂರಿನಲ್ಲಿ ನಡೆದ ಭಾರತ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟದ ಕಾರ್ಯಕಾರಣಿ ಸಭೆಯಲ್ಲಿ ಅತ್ಯುತ್ತಮ ಜಿಲ್ಲಾಧ್ಯಕ್ಷ ಪ್ರಶಸ್ತಿ ಲಭಿಸಿದ ಹಿನ್ನಲೆಯಲ್ಲಿ ಪಟ್ಟಣದಲ್ಲಿ ಯುವಕರಿಂದ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾಪ್ರಧಾನ ಕಾರ್ಯದರ್ಶಿ ರತ್ನದೀಪ್ ಕಸ್ತೂರೆ ಮಾತನಾಡಿ, ಜಿಲ್ಲೆಯಲ್ಲಿ ವಿದ್ಯಾರ್ಥಿಗಳ ಕೂಗಿಗಾಗಿ ಕಾರ್ಯ ನಿರ್ವಹಿಸುತ್ತಿರುವ ಸಚಿನ್ ಮಲ್ಕಾಪುರೆಗೆ ವಿದ್ಯಾರ್ಥಿಗಳ ಸಮಸ್ಯೆ ಬಂದಾಗ ಮುಂಚೂಣಿಯಲ್ಲಿ ನಿಂತು ಹೋರಾಟ ಮಾಡುವ ವಿದ್ಯಾರ್ಥಿ ಮುಖಂಡರಾಗಿದ್ದಾರೆ ಎಂದರು.
ಈ ವೇಳೆ ಭೀಮ್ ರಾವ ಮಾಲಗತ್ತಿ, ರಾಹುಲ್ ಜಾಧವ, ಶಾಮವೆಲ್, ರಾಜಕುಮಾರ ಸಿರ್ಸಿ, ಅವಿನಾಶ್ ಸೇರಿದಂತೆ ಇತರರಿದ್ದರು.