ಔರಾದ: ರವಿದಾಸರ ಬೋಧನೆ, ವಿಚಾರಗಳು ಹಲವಾರು ಶ್ರೇಷ್ಠ ವ್ಯಕ್ತಿಗಳಿಗೆ ಪ್ರಭಾವಿತರಾಗಿದ್ದರು. ಇದೇ ಭಕ್ತಿ ಚಳುವಳಿಗೆ ಸಂಕೇತ ಎಂದು ಪ್ರಾಂಶುಪಾಲ ನವೀಲಕುಮಾರ ಉತ್ಕಾರ್ ಹೇಳಿದರು.
ತಾಲೂಕಿನ ಸಂತಪುರ್ ಸಿದ್ದರಾಮೇಶ್ವರ ಪದವಿಪೂರ್ವ ಕಾಲೇಜಿನಲ್ಲಿ ಸಂತ ರವಿದಾಸ ಮಹಾರಾಜರ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ರವಿದಾಸರು ಜಾತಿ ವ್ಯವಸ್ಥೆ, ಲಿಂಗ ತಾರತಮ್ಯವನ್ನು ವಿರೋಧಿಸಿದರು. ಶುದ್ಧ ಕಾಯಕ ಮನಸ್ಸಿನಲ್ಲಿ ನಂಬಿಕೆ ಇಟ್ಟವರು. ರವಿದಾಸರ ಭಕ್ತಿ ಪದ್ಯಗಳು ಕೆಲವು ಧರ್ಮದ ಪವಿತ್ರ ಗ್ರಂಥಗಳಲ್ಲಿ ಸೇರಿಸಿ ಅವರಿಗೆ ಗೌರವ ನೀಡಲಾಗುತ್ತದೆ. ದೇಶದಲ್ಲಿ ಅಷ್ಟೇ ಅಲ್ಲದೆ ವಿದೇಶದಲ್ಲೂ ಭಾರತೀಯ ಸಂಸ್ಕೃತಿ ಪ್ರಭಾವ ಬೀರಿದವರು ಎಂದು ಹೇಳಿದರು.
ಉಪನ್ಯಾಸಕರಾದ ಶಿವಪುತ್ರ ಧರಣಿ ಮಾತನಾಡಿ, ಯುವಕರು ತಮ್ಮ ಮನಸ್ಸನ್ನು ನಿಯಂತ್ರದಲ್ಲಿಟ್ಟು ಕೊಳ್ಳಬೇಕು. ಧನಾತ್ಮಕ ವಿಚಾರ ಮಾಡಬೇಕು ಎಂದು ಹೇಳಿದರು. ಈ ಸಂದರ್ಭದಲ್ಲಿ ಉಪನ್ಯಾಸಕರಾದ ಕಲ್ಲಪ್ಪ ಬುಟ್ಟೆ, ಸುಧಾ ಕೌಟಿಗೆ, ವನದೇವಿ ಎಕ್ಕಳೆ, ವೀರಾತಾಯಿ ಕಾಂಬಳೆ, ವಿಜಯಲಕ್ಷ್ಮಿ ಪಾಟೀಲ್ ಇತರರು ಇದ್ದರು.