ಔರಾದ: ಯುವಕರು ಹಾಗೂ ಸಮಸ್ತ ಜನ ದುಶ್ಚಟಗಳಿಗೆ ಬಲಿಯಾಗದಿರಲಿ ಎಂದು ಪೂಜ್ಯಶ್ರೀ ಗುರುಬಸವ ಪಟ್ಟದೇವರು ದುಶ್ಚಟಗಳು ನನ್ನ ಜೋಲಿಗೆಯಲ್ಲಿ ಹಾಕಿ ತಮ್ಮ ಜೀವನ ಸುಖವಾಗಿ ಸಾಗಲಿ ಎಂದು ಹಿತವನ್ನು ಬಯಸಿದವರು ಪೂಜ್ಯ ಶ್ರೀ ಗುರುಬಸವ ಪಟ್ಟದೇವರು ಎಂದು ಪ್ರಾಂಶುಪಾಲ ನವೀಲಕುಮಾರ ಉತ್ಕಾರ್ ಹೇಳಿದರು.
ಸಂತಪುರ್ ಸಿದ್ದರಾಮೇಶ್ವರ ಪದವಿಪೂರ್ವ ಕಾಲೇಜಿನಲ್ಲಿ ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ ಬೆಂಗಳೂರು ವತಿಯಿಂದ ಕೊಡಲ್ಪಡುವ ‘ಕರ್ನಾಟಕ ರಾಜ್ಯ ಸಂಯಮ ಪ್ರಶಸ್ತಿ 2021’ರ ಪೂಜ್ಯಶ್ರೀ ಗುರುಬಸವ ಪಟ್ಟದೇವರ ಪಡೆದ ಪ್ರಯುಕ್ತ ಸಿಹಿ ಹಂಚಿ ಸಂಭ್ರಮಿಸಿ ಅವರು ಮಾತನಾಡಿದರು.
ಮದ್ಯಪಾನ ಹಾಗೂ ಧೂಮಪಾನ ಸೇವನೆಯಿಂದ ಪುರುಷರು ಹಾಗೂ ಸ್ತ್ರೀಯರ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ ಎಂಬ ಅಂಶವನ್ನು ಮನಗಂಡು ಪೂಜ್ಯಶ್ರೀಗಳು ಜೋಳಿಗೆ ಹಿಡಿದು ದುಶ್ಚಟಗಳ ಭಿಕ್ಷೆ ಬೇಡಿದ ಪ್ರಯುಕ್ತ ಸಂಯಮ ಪ್ರಶಸ್ತಿ ದೊರೆತಿದ್ದು ಇಡಿ ಬಸವ ಭಕ್ತರಿಗೆ ಹರ್ಷವನ್ನು ತಂದಿದೆ ಎಂದು ಹೇಳಿದರು.
ಅನುಭವ ಮಂಟಪ ಗುರುಕುಲ ಪ್ರಾಥಮಿಕ ಶಾಲೆ ಮುಖ್ಯ ಗುರುಗಳಾದ ಗಜಾನಂದ ಮುಂಗೆ ಮಾತನಾಡಿ, ದುಶ್ಚಟಗಳಿಗೆ ಬಲಿಯಾದ ವ್ಯಕ್ತಿಯ ಜೀವನ ಅತ್ಯಲ್ಪವಾಗುತ್ತದೆ. ಇದರಿಂದ ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವಂತೆ ಕರೆ ನೀಡಿದರು.
ಈ ಸಂದರ್ಭದಲ್ಲಿ ಸಂತಪುರ ಅನುಭವ ಮಂಟಪ ಅಧ್ಯಕ್ಷರಾದ ಬಸವರಾಜ ಬಿರಾದರ, ಉಪನ್ಯಾಸಕರಾದ ಕಲ್ಲಪ್ಪ ಬುಟ್ಟೆ, ಶಿವಪುತ್ರ ಧರಣಿ, ಸುಧಾ ಕೌಟಿಗೆ, ಅಂಬಿಕಾ ವಿಶ್ವಕರ್ಮ, ವನದೇವಿ ಎಕ್ಕಳೆ, ಮೀರಾತಾಯಿ ಕಾಂಬಳೆ ಸೇರಿದಂತೆ ಇತರರು ಉಪಸ್ಥಿತರಿದ್ದರು.