ಔರಾದ: ಬಸವಕಲ್ಯಾಣದಲ್ಲಿ ಮಾರ್ಚ್ 11, 12ರಂದು ನಡೆಯಲಿರುವ ಬಸವ ಉತ್ಸವ ಅಂಗವಾಗಿ ಪಟ್ಟಣದ ಅಮರೇಶ್ವರ್ ಮಂದಿರದಲ್ಲಿ ಸ್ಥಳೀಯ ಕಲಾ ತಂಡಗಳ ಆಯ್ಕೆಗಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ಸಂದರ್ಶನ ಹಮ್ಮಿಕೊಳ್ಳಲಾಗಿತು.
ಈ ಸಂದರ್ಶನದಲ್ಲಿ ಸುಮಾರು 5ರಿಂದ 6 ಕಲಾ ತಂಡಗಳು ಭಾಗವಹಿಸಿದವು. ಅದರಲ್ಲಿ ಬಸವರಾಜ ಪಾಟೀಲ್ ಸಂತಪುರ್ ಹಾಗೂ ಸಂಗಡಿಗರು ಮತ್ತು ಡಾ.ಪಂಡಿತ್ ಪುಟ್ಟರಾಜು ಸಂಗೀತ ಸಾಹಿತ್ಯ ನಾಟ್ಯ ಚಾರಿಟೇಬಲ್ ಟ್ರಸ್ಟ್ ತಂಡದವರು ವಚನ ಗಾಯನದಲ್ಲಿ ಆಯ್ಕೆಯಾಗಿದ್ದಾರೆ. ಸಾಂಸ್ಕೃತಿಕ ಕಾರ್ಯಕ್ರಮದ ಮುಖ್ಯ ವೇದಿಕೆಯಲ್ಲಿ ಇವರಿಗೆ ಅವಕಾಶ ನೀಡಲಾಗುವುದು ಎಂದು ತೀರ್ಪುಗಾರರು ಹಿರಿಯ ಪತ್ರಕರ್ತರಾದ ಶರಣಪ್ಪಾ ಚಿಟಮೇ ತಿಳಿಸಿದರು.
ಈ ವೇಳೆ ಸುಭಾಸ್ ಚಂದ್ರ ಭೋಸ್ ಯುವಕ ಸಂಘದ ಅಧ್ಯಕ್ಷ ರತ್ನದೀಪ ಕಸ್ತೂರೆ, ಯುವ ಮುಖಂಡ ರಾಹುಲ ಜಾಧವ, ಕಲಾವಿದರಾದ ಸಂಗಮೇಶ ಪಾಟೀಲ, ನಾಗಯ್ಯ ಸ್ವಾಮಿ, ಹಾವಗಿರಾವ, ಮಾರುತಿ, ಮಾಣಿಕಪ್ಪಾ ಗುಡುರೆ ಸೇರಿ ಅನೇಕರು ಉಪಸ್ಥಿತರಿದ್ದರು.