ಔರಾದ: ಉತ್ತಮ ಆರೋಗ್ಯಕ್ಕೆ ಶ್ರಮದಾನ ಅಗತ್ಯವಾಗಿದ್ದು ನಾವು ವಾಸಿಸುವ ಸ್ಥಳದ ಸುತ್ತ ಮುತ್ತಲು ನಾವು ಸ್ವಚ್ಛತೆಯನ್ನು ಕಾಪಾಡಬೇಕು ಎಂದು ಸಾಮಾಜಿಕ ಕಾರ್ಯಕರ್ತ ರತ್ನದೀಪ್ ಕಸ್ತೂರೆ ಹೇಳಿದರು.
ತಾಲೂಕಿನ ಏಕಲಾರ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ನೆಹೆರು ಯುವ ಕೇಂದ್ರ ಬೀದರ್, ಸುಭಾಸ್ ಚಂದ್ರ ಭೋಸ್ ಯುವಕ ಸಂಘ (ರಿ) ಔರಾದ ವತಿಯಿಂದ ಶನಿವಾರ ಹಮ್ಮಿಕೊಂಡಿದ್ದ ಶ್ರಮದಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಶ್ರಮದಾನ ಮಾಡುವುದನ್ನು ಮೈಗುಡಿಸಿಕೊಳ್ಳಬೇಕು ಮತ್ತು ಈ ಶಿಬಿರದಲ್ಲಿ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ಏಕಲಾರ ಗ್ರಾಪಂ ಅಧ್ಯಕ್ಷ ಶರತ್ ಪಟೇಲ್, ಗ್ರಾಪಂ ಸಸ್ಯರಾದ ಶಿವಶಂಕರ್ ಮಂಣಗೇಮಪುರೆ, ಕಲ್ಲಪ್ಪಾ ಮುಧಾಳೆ, ಗಂಗಶೆಟ್ಟಿ ಬಿರಾದಾರ್, ಬಕ್ಕಪ್ಪಾ ಕಲಪ್ಪಾ, ಸಂಜುಕುಮಾರ್ ಭೂತೆ, ರಾಮಚಂದ್ರ, SDMC ಅಧ್ಯಕ್ಷರಾದ ಶಿವಕುಮಾರ್ ಪಾಟೀಲ, ಮುಖ್ಯ ಗುರುಗಳಾದ ಜ್ಞಾನದೇವ ಪಾಂಚಾಳ, ಸುನಿಲ್ ಮಿತ್ರಾ, ರಾಹುಲ್ ಜಾಧವ, ನಾಗೇಶ್ ಪಾಟೀಲ್, ರಮೇಶ್ ಪಾಂಚಾಳ್, ಮಹಾದೇವ ಶಿಂದೆ ಸೇರಿದಂತೆ ಇತರರು ಉಪಸ್ಥಿತರಿದ್ದರು.