ಔರಾದ: ಸ್ವಾಮಿ ವಿವೇಕಾನಂದರು ವ್ಯಕ್ತಿಯಾಗಿರದೇ, ವ್ಯಕ್ತಿತ್ವವುಳ್ಳ ಮಹಾನ ವೀರ ಸನ್ಯಾಸಿಯಾಗಿದ್ದರು ಎಂದು ಅಂತರಾಷ್ಟ್ರೀಯ ಸಂಪನ್ಮೂಲ ವ್ಯಕ್ತಿ ಹಾಗೂ ಕೌಶಲ್ಯ ಮತ್ತು ಇಚ್ಛೆ ಅಭಿವೃದ್ದಿ ಸಂಸ್ಥೆ ಬೆಂಗಳೂರು ಸಂಸ್ಥಾಪಕರಾದ ಡಾ. ಜಗನ್ನಾಥ್ ರಾವ್ ಹೇಳಿದರು.
ತಾಲೂಕಿನ ಸಂತಪುರ್ ಸಿದ್ದರಾಮೇಶ್ವರ ಪದವಿ ಪೂರ್ವ ಕಾಲೇಜಿನಲ್ಲಿ ಗುರುವಾರ ಯುವಕರ ದಿನಾಚರಣೆ ವೀರ ಸನ್ಯಾಸಿ ಸ್ವಾಮಿ ವಿವೇಕಾನಂದರವರ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಯುವ ವಿದ್ಯಾರ್ಥಿಗಳು ಸ್ವಾಮಿ ವಿವೇಕಾನಂದರಂತೆ ತಮ್ಮನ್ನು ತಾವು ಅರಿತು, ಅವರ ಆದರ್ಶ ತತ್ವಗಳನ್ನು ಅಳವಡಿಸಿಕೊಂಡು ಬದುಕಿದರೆ ಬದುಕು ಸಾರ್ಥಕವಾಗುತ್ತದೆ ಎಂದು ಹೇಳಿದರು.
ವಿದ್ಯಾರ್ಥಿನಿ ಅಂಜಲಿ ಶಿವಕುಮಾರ್ ಮಾತನಾಡಿ, ಇಡೀ ಜಗತ್ತಿಗೆ ಭಾರತ ಸಂಸ್ಕೃತಿಯನ್ನು ಪರಿಚಯಿಸಿದ ಕೀರ್ತಿ ಸ್ವಾಮಿ ವಿವೇಕಾನಂದರವರಿಗೆ ಸಲ್ಲುತ್ತದೆ ಎಂದು ಹೇಳಿ ಅವರ ಜೀವನ ಚರಿತ್ರೆಯನ್ನು ತಿಳಿಸಿದರು.
ಪ್ರಾಂಶುಪಾಲ ನವೀಲಕುಮಾರ ಉತ್ಕಾರ್ ಮಾತನಾಡಿ, ಮಹತ್ವಾಕಾಂಕ್ಷಿ ಇಲ್ಲದ ಮನುಷ್ಯ ಬಡವ, ನಿಮ್ಮ ಆತ್ಮವೇ ನಿಮ್ಮ ಗುರು, ನಿಮ್ಮನ್ನು ನೀವು ನಂಬಿ, ಏಕಾಗ್ರತೆ ಜ್ಞಾನದ ಕೀಲಿ ಕೈ, ಇತರರಿಗೆ ಒಳ್ಳಯದನ್ನು ಮಾಡಿದರೆ ಅಷ್ಟು ಹೃದಯ ಶುದ್ಧವಾಗುತ್ತದೆ ಇಂತಹ ಹತ್ತಾರು ಅದ್ಭುತ ಕೊಡುಗೆ ನೀಡಿದವರು ಸ್ವಾಮಿ ವಿವೇಕಾನಂದರವರೆಂದು ಹೇಳಿದರು.
ಇದೇ ಸಂದರ್ಭದಲ್ಲಿ ಸ್ವಾಮಿ ವಿವೇಕಾನಂದರವರ ಜೀವನ ಹಾಗೂ ಯುವಕರಿಗೆ ನೀಡಿದ ಕೊಡುಗೆ ಕುರಿತು ಪ್ರಬಂಧ ಸ್ಪರ್ಧೆಯಲ್ಲಿ ಕ್ರಮವಾಗಿ ಪ್ರಥಮ, ದ್ವಿತೀಯ, ತೃತೀಯ ಸ್ಥಾನ ಪಡೆದ ಅಂಜಲಿ ಶಿವಕುಮಾರ, ಅಂಬಿಕಾ ಶಿವರಾಜ, ಶಾಹಿಸ್ತಾ ಗಫಾರ್ ಖಾನ್ ವಿಜೇತ ಯುವ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು.
ಈ ವೇಳೆ ಉಪನ್ಯಾಸಕರಾದ ಕಲ್ಲಪ್ಪ ಬುಟ್ಟೆ, ಸುಧಾ ಕೌಟಿಗೆ, ವನದೇವಿ ಎಕ್ಕಳೆ, ಅಂಬಿಕಾ ವಿಶ್ವಕರ್ಮ, ಮೀರಾತಾಯಿ ಕಾಂಬಳೆ ಹಾಗೂ ಇತರರು ಉಪಸ್ಥಿತರಿದ್ದರು